ಬೆಳಗಾವಿ: ‘ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಅಕ್ಕಿ ಅಂಗಡಿ ಮಾಡಿ ಕೊಡುವುದಾಗಿ ನಂಬಿಸಿ ₹12 ಲಕ್ಷ ಪಡೆದು ಮೋಸ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡು ನನ್ನ ಹಣ ಮರಳಿ ಕೊಡಿಸಬೇಕು. ಇಲ್ಲದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಬೇಕು’ ಎಂದು ಬೈಲಹೊಂಗಲದ ಮಹಾಂತೇಶ ಹೊಟಕರ್ ಎನ್ನುವವರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

‘ನಿವೃತ್ತ ಪೊಲೀಸ್ ಅಧಿಕಾರಿ ಸದಾಶಿವ ಸೋನೋನಿ ಎನ್ನುವವರು ಅಕ್ಕಿ ವ್ಯಾಪಾರ ಹಾಕಿಕೊಡುವುದಾಗಿ ನಂಬಿಸಿದರು. ಅವರಿಗೆ ಹಾಗೂ ಅವರ ಪತ್ನಿ, ಪುತ್ರನ ಖಾತೆಗೆ 2017ರಿಂದ 2019ರವರೆಗೆ ₹12 ಲಕ್ಷ ಹಾಕಿದ್ದೇನೆ. ಕೊನೆಗೆ ಸರಿಯಾಗಿ ಉದ್ಯಮ ಮಾಡಿ ಕೊಡದೇ ಮೋಸ ಮಾಡಿದ್ದಾರೆ. ನನ್ನ ಹಣವನ್ನು ಮರಳಿ ಕೇಳಿದರೂ ಕೊಡುತ್ತಿಲ್ಲ. ಇದರಿಂದ ನನಗೆ ನಷ್ಟವಾಗಿದೆ’ ಎಂದು ತಿಳಿಸಿದ್ದಾರೆ.

ನ್ಯಾಯ ಕೊಡಿಸುವಂತೆ ಟಿಳಕವಾಡಿ ಠಾಣೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಐಜಿಪಿ ಅವರಿಗೂ ಮನವಿ ಮಾಡಿದ್ದೇನೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-21-2111650189

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.