ಬೆಳಗಾವಿ: ರಾಜ್ಯ ಸರ್ಕಾರದ ‘ಪ್ರಗತಿಪಥ’ ಯೋಜನೆಯಡಿ ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಭಾಗದಲ್ಲಿ 481.14 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 6 ವರ್ಷಗಳ ನಂತರ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಎ.ಡಿ.ಬಿ. ಅವರೊಂದಿಗೆ ಸಮನ್ವಯ ಸಾಧಿಸಿ ಬಾಹ್ಯ ಆರ್ಥಿಕ ಸಹಾಯದೊಂದಿಗೆ ಪ್ರಗತಿಪಥ ಯೋಜನೆಗೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭವಾಗಲಿವೆ.

ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ಸಂಪರ್ಕವನ್ನು ಸುಧಾರಿಸಲು ಜಾರಿಗೆ ತಂದಿರುವ ಪ್ರಮುಖ ಅಭಿವೃದ್ಧಿ ಯೋಜನೆಯೇ ಪ್ರಗತಿಪಥ. ಈ ಯೋಜನೆಯಡಿ ರಾಜ್ಯದ 7,110 ಕಿಲೋ ಮೀಟರ ಉದ್ದದ ಗ್ರಾಮೀಣ ರಸ್ತೆಗಳನ್ನು ₹ 5,190 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇದರಲ್ಲಿ ಜಿಲ್ಲೆಯ 481.14 ಕಿ.ಮೀ. ರಸ್ತೆಗೆ ಯೋಜನೆಯಡಿ ಒಟ್ಟು ಅಂದಾಜು ವೆಚ್ಚ ₹349 ಕೋಟಿ ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಸುಸ್ಥಿತಿಗೆ ತರುವುದು ಮತ್ತು ವ್ಯವಸ್ಥಿತ ಹಾಗೂ ಗುಣಾತ್ಮಕ ರಸ್ತೆ ಜಾಲವನ್ನು ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯನ್ನು ಬಾಹ್ಯ ಆರ್ಥಿಕ ಸಹಾಯದೊಂದಿಗೆ ಶೇ.70ರಷ್ಟು ಸಾಲ ಮತ್ತು ರಾಜ್ಯದ ಪಾಲು ಶೇ.30 ರಷ್ಟು ಹಂಚಿಕೆಯೊಂದಿಗೆ ಅನುಷ್ಠಾನ ಮಾಡಲಾಗುವುದು. ಇದು 5 ವರ್ಷಗಳ ವಾರ್ಷಿಕ ನಿರ್ವಹಣಾ ಯೋಜನೆಯಾಗಿದೆ. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಈ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಲಿದೆ. ಯೋಜನೆಯನ್ನು ವಿಧಾನಸಭಾ ಕ್ಷೇತ್ರವಾರು ಪ್ಯಾಕೇಜ್ ಆಧಾರದ ಮೇಲೆ ಜಾರಿಗೊಳಿಸಲಾಗುವುದು.

ಸದರಿ ರಸ್ತೆಗಳ ಅಂದಾಜು ಪತ್ರಿಕೆಗಳನ್ನು ಸಮಾಲೋಚಕರುಗಳಿಂದ ತಯಾರಿಸಿ, ಬೆಳಗಾವಿ ಜಿಲ್ಲೆಯ ಬ್ಯಾಚ್-1ರ ಕಾಮಗಾರಿಗಳ ₹163 ಕೋಟಿಗಳಿಗೆ 230.54 ಕಿ.ಮೀ. ರಸ್ತೆ ಉದ್ದಕ್ಕೆ ಟೆಂಡರ್ ಕರೆಯನ್ನು ದಿನಾಂಕ: 15-05-2026 ರಂದು ಆಹ್ವಾನಿಸಲಾಗಿದೆ. ದಿನಾಂಕ: 25-05-2026 ರಿಂದ 29-06-2026 ರವರೆಗೆ ಕೆ.ಪಿ.ಪಿ. ಪೋರ್ಟಲ್ನಲ್ಲಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-21-997353637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.