ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲ್ಲೂಕಾಗಲಿ: ಲಕ್ಷ್ಮಿ

Last Updated 7 ಏಪ್ರಿಲ್ 2022, 13:19 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಹೊಸ ತಾಲ್ಲೂಕನ್ನಾಗಿಸಲು ಪ್ರಯತ್ನ ಮಾಡುತ್ತಿದ್ದೇನೆ. ಇದು ಯಶಸ್ವಿಯಾದರೆ ಕ್ಷೇತ್ರಕ್ಕೆ ಹೊಸ ರೂಪ ಬರಲಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪಶು ಚಿಕಿತ್ಸಾಲಯದ ಕಟ್ಟಡವನ್ನು‌ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಲ್ಕು ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ತೃಪ್ತಿ ನನಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕಂಡು ಕ್ಷೇತ್ರದ ಜನರ ಮುಖದಲ್ಲಿ ಸಂತೃಪ್ತಿಯನ್ನು ನೋಡುತ್ತಿದ್ದೇನೆ. ಅವರ ಸಹಕಾರದಿಂದ ಇನ್ನಷ್ಟು ಯೋಜನೆಗಳನ್ನು ತರಲಿದ್ದೇನೆ’ ಎಂದರು.

ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಯಲ್ಲಪ್ಪ ಡೇಕೋಳ್ಕರ್, ಶಿವಾಜಿ ಬೋಕಡೆ, ಅಶೋಕ ಗೌಡ, ನಾರಾಯಣ ಚವ್ಹಾಣ, ರವಿ ನಾಯ್ಕ, ಅನಿಲ ಗೌಡ, ಶಿವಾಜಿ ಬೆಟಗೇರಿಕರ್, ಪ್ರಸಾದ ಬೋಕಡೆ, ರೇಹಮಾನ್ ತಹಶೀಲ್ದಾರ್‌, ನಾರಾಯಣ ಕಾಂಬಳೆ, ಸುರೇಶ ಕೀಣೆಕರ್, ಡಾ.ಲಕ್ಷ್ಮಣ ಜಂಬಗಿ, ಪಿಡಿಒ ಅಶ್ವಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT