ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನಗಳ ಸೇವೆ ರದ್ದಾಗುತ್ತಿದೆ. ಇದರಿಂದ ಸಾಂಬ್ರಾ ನಿಲ್ದಾಣ ಸೊರಗುತ್ತಿದ್ದು, ಪ್ರಯಾಣಿಕರ ಸಂಖ್ಯೆಯೂ ಕುಸಿಯುತ್ತಿದೆ.

2024-25ನೇ ಸಾಲಿನಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಮಾರ್ಗವಾಗಿ 3,40,295 ಜನರು ಪ್ರಯಾಣಿಸಿದ್ದರು. 2025–26ನೇ ಸಾಲಿನಲ್ಲಿ ಆ ಸಂಖ್ಯೆ 3,01,516ಕ್ಕೆ (ಶೇ 11.4ರಷ್ಟು ಕಡಿಮೆ) ಇಳಿಕೆಯಾಗಿದೆ.

‘ಪ್ರಯಾಣಿಕರಿಂದ ಉತ್ತಮ ಸ್ಪಂದನೆಯಿದ್ದರೂ ವಿವಿಧ ಮಾರ್ಗಗಳಲ್ಲಿ ಸೇವೆ ರದ್ದುಪಡಿಸಿದ್ದಕ್ಕೆ ಜನರಿಂದ, ಅದರಲ್ಲೂ ಉದ್ಯಮಿಗಳಿಂದ ಅಸಮಾಧಾನವಿದೆ. ಇಲ್ಲಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನಗಳ ಸಂಖ್ಯೆ ಪ್ರಮಾಣ ಕುಸಿಯಲು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣ’ ಎಂಬ ಆರೋಪವಿದೆ.

‘ಯಾವುದೇ ಮಾರ್ಗದಲ್ಲಿ ಸೇವೆ ರದ್ದುಪಡಿಸಬೇಡಿ. ರದ್ದಾದ ಮಾರ್ಗಗಳಲ್ಲಿ ಪುನಃ ಆರಂಭಿಸಿ ಎಂದು ನಾವು ಕೋರಿದ್ದೇವೆ. ಆದರೆ, ಇಂಧನ ದರ ಹೆಚ್ಚಳ ಕಾರಣಕ್ಕೆ ವಿಮಾನಯಾನ ಸಂಸ್ಥೆಗಳು ಮನಸ್ಸು ಮಾಡುತ್ತಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳುತ್ತಾರೆ.

‘ಉಡಾನ್–3’ ಯೋಜನೆಯಡಿ ಸಾಂಬ್ರಾದಿಂದ ಮುಂಬೈ, ಪುಣೆ, ಹೈದರಾಬಾದ್, ತಿರುಪತಿ, ಸೂರತ್, ಕಡಪ, ಮೈಸೂರು, ಇಂದೋರ್, ಜೋಧಪುರ, ಅಹಮದಾ ಬಾದ್, ನಾಸಿಕ್ ಮತ್ತು ನಾಗ್ಪುರಕ್ಕೆ ನೇರ ವಿಮಾನಗಳು 2019ರಿಂದ ಹಾರಾಟ ನಡೆಸಿದ್ದವು. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ಆದರೂ, ಯೋಜನೆ ಮುಗಿದ ಕಾರಣ ವಿಮಾನಯಾನ ಸಂಸ್ಥೆಗಳು ಹಂತ–ಹಂತವಾಗಿ ಸೇವೆ ಸ್ಥಗಿತಗೊಳಿಸಿದವು. ‘ಉಡಾನ್–3’ ಯೋಜನೆಯಡಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲ ವಿಮಾನಗಳ ಸೇವೆ ಈ ವರ್ಷ ರದ್ದಾಗಿದೆ.

ಸದ್ಯ ಸಾಂಬ್ರಾದಿಂದ ದೆಹಲಿ, ಹೈದರಾಬಾದ್, ಬೆಂಗಳೂರು, ನವಿ ಮುಂಬೈ ಮತ್ತು ಮುಂಬೈ ಮಾರ್ಗದಲ್ಲಿ ನಿತ್ಯ ಆರು ವಿಮಾನಗಳು(12 ಟ್ರಿಪ್) ಕಾರ್ಯಾಚರಣೆ ಮಾಡುತ್ತಿವೆ.

ಉಡಾನ್–3 ಯೋಜನೆ ಅವಧಿ ಮುಗಿದಿದ್ದರಿಂದ ಮತ್ತು ಇಂಧನ ದರ ಹೆಚ್ಚಳದ ಕಾರಣಕ್ಕೆ, ವಿಮಾನಯಾನ ಸಂಸ್ಥೆಗಳು ಹಲವು ಮಾರ್ಗಗಳಲ್ಲಿನ ಸೇವೆ ರದ್ದುಪಡಿಸಿವೆ. ಅಹಮದಾಬಾದ್ ಮಾರ್ಗದಲ್ಲಿ ಶೀಘ್ರ ಸೇವೆ ಆರಂಭದ ನಿರೀಕ್ಷೆ ಇದೆ

–ಎಸ್.ತ್ಯಾಗರಾಜನ್, ನಿರ್ದೇಶಕ, ಸಾಂಬ್ರಾ ವಿಮಾನ ನಿಲ್ದಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.