ಬೆಳಗಾವಿ: ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದ ಸತೀಶ ಜಾರಕಿಹೊಳಿ ಕೊನೆಗೂ ಮಂತ್ರಿ ಸ್ಥಾನಕ್ಕೇ ತೃಪ್ತರಾಗಿದ್ದಾರೆ. ಸಿದ್ದರಾಮಯ್ಯ ಅವರ ನಂತರ ಅಹಿಂದ ಮುನ್ನಡೆಸುವ ಪ್ರಬಲ ನಾಯಕ ಎಂದೇ ಅವರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ದಲಿತ ಮುಖ್ಯಮಂತ್ರಿ ವಿಷಯ ಮುನ್ನೆಲೆಗೆ ಬಂದಾಗಲೆಲ್ಲ ಸತೀಶ ಜಾರಕಿಹೊಳಿ ಸುದ್ದಿಯಲ್ಲಿರುತ್ತಿದ್ದರು.

ಮಗ್ಗಲು ಬದಲಿಸಿದ ರಾಜಕಾರಣದಲ್ಲಿ ಅವರು ಉಪಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಆದರೆ, ಎರಡೂ ಸ್ಥಾನಗಳ ಬಗ್ಗೆ ಹೈಕಮಾಂಡ್ ಇದೂವರೆಗೆ ತುಟಿ ಬಿಚ್ಚಿಲ್ಲ. ಬದಲಾಗಿ, ಸಂಪುಟ ದರ್ಜೆ ಸ್ಥಾನ ಮಾತ್ರ ಕಲ್ಪಿಸಿದೆ.

ಕಾದುನೋಡುವ ತಂತ್ರ ಅನುಸರಿಸಿದ ಸತೀಶ ಅವರು, ಹಠ ಹಿಡಿಯದೇ ಸಿಕ್ಕ ಸ್ಥಾನ ಅಲಂಕರಿಸಿದ್ದಾರೆ. ಆದರೆ, ಅವರ ಆಪ್ತರಲ್ಲಿ ನಿರಾಸೆ ಮೂಡಿದ್ದಂತೂ ನಿಜ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ; ಮೊದಲ ಪಟ್ಟಿಯಲ್ಲೇ ಅವರು ಮಂತ್ರಿಯಾಗಿದ್ದಾರೆ ಎಂಬ ಕಾರಣಕ್ಕೆ ಸಂಭ್ರಮವನ್ನೂ ಆಚರಿಸಿದ್ದಾರೆ.

ಸಾಧನೆಯ ಹಾದಿ: 1962ರ ಜೂನ್ 1ರಂದು ಗೋಕಾಕದಲ್ಲಿ ಜನಿಸಿದ ಸತೀಶ ಅವರು, ಕೃಷಿ ಹಾಗೂ ಉದ್ಯಮ ಹೊಂದಿದ ಕುಟುಂಬದಲ್ಲಿ ಬೆಳೆದರು. ಗೋಕಾಕದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು. ಜನತಾದಳ ಹಾಗೂ ಜೆಡಿಎಸ್ ಮೂಲಕ ರಾಜಕೀಯ ಪ್ರವೇಶಿಸಿದ ಅವರು, 2006ರಿಂದ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ಬೆಳೆದರು. ದಶಕ ಕಳೆದಂತೆ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಆಗಿ ಬೆಳೆದರು.

ಸಹಕಾರ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿದ ಅವರು, ಸಂಘಟನಾ ಸಾಮರ್ಥ್ಯ, ಜನಸಂಪರ್ಕ ಮತ್ತು ಅಭಿವೃದ್ಧಿ ರಾಜಕಾರಣದ ಮೂಲಕ ರಾಜ್ಯಮಟ್ಟದ ನಾಯಕರಾದರು.

1992ರಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಸೇವಾ ಜೀವನ ಪ್ರವೇಶಿಸಿದರು. 2023ರ ಸರ್ಕಾರದಲ್ಲಿ ಸ್ಥಾನ ಪಡೆಯುವವರೆಗೆ ಅವರು ನಾಲ್ಕು ಖಾತೆಗಳನ್ನು ನಿರ್ವಹಿಸಿದರು.

ಸುರೇಶ ಅಂಗಡಿ ಅವರ ನಿಧನದ ನಂತರ ತೆರವಾದ ಬೆಳಗಾವಿ ಲೋಕಸಭಾ ಸ್ಥಾನದಿಂದ 2021ರ ಉಪಚುನಾವಣೆಯಲ್ಲಿ ಸೋಲುಂಡರು. ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದ ಮೊದಲ ರಾಜಕಾರಣಿ ಮಂಗಳಾ ಅಂಗಡಿ.

2020ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗುವ ಮೂಲಕ ತಮ್ಮ ಸಂಘಟನಾ ಸಾಮರ್ಥ್ಯವನ್ನು ತೋರ್ಪಡಿಸಿದರು. ಇಡೀ ರಾಜ್ಯದಲ್ಲಿ ಜಾರಕಿಹೊಳಿ ಕುಟುಂಬ ರಾಜಕೀಯ ಶಕ್ತಿ ಕೇಂದ್ರ ಎಂಬಷ್ಟು ಪ್ರಭಾವ ಬೆಳೆಸಿಕೊಂಡಿದೆ.

ಸಕ್ಕರೆ ಕಾರ್ಖಾನೆಗಳು, ಎಥೆನಾಲ್ ಘಟಕಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಕೃಷಿ ಆಧಾರಿತ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ವಿದೇಶಗಳಲ್ಲಿ ಉದ್ಯಮ ಹೀಗೆ ಎಲ್ಲದರಲ್ಲೂ ಅವರದು ಎತ್ತಿದ ಕೈ.

ಸತೀಶ ನಡೆದು ಬಂದ ಹಾದಿ

ವರ್ಷ;ನಿಭಾಯಿಸಿದ ಖಾತೆ

1992–1998;ಡಿಸಿಸಿ ಬ್ಯಾಂಕ್ ನಿರ್ದೇಶಕ

1998–2008;ವಿಧಾನ ಪರಿಷತ್ ಸದಸ್ಯ

2004–2005;ಜವಳಿ ಇಲಾಖೆ ಸಚಿವ

2008–2013;ಯಮಕನಮರಡಿ ಶಾಸಕ

2013–2016;ಅಬಕಾರಿ ಸಚಿವ

2018–2019;ಅರಣ್ಯ ಖಾತೆ ಸಚಿವ

2020–2026;ಕೆಪಿಸಿಸಿ ಕಾರ್ಯಾಧ್ಯಕ್ಷ

2023–2026;ಲೋಕೋಪಯೋಗಿ ಸಚಿವ

ಎರಡನೇ ಪಟ್ಟಿ ನಿರೀಕ್ಷೆಯಲ್ಲಿ

ಜಿಲ್ಲೆಯಲ್ಲಿ ಕಾಂಗ್ರೆಸ್ ಹೊಂದಿದ 11 ಶಾಸಕರ ಪೈಕಿ 7 ಪಳಗಿದ ಹುಲಿಗಳೇ ಇವೆ. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಠಿಕಾಣೆ ಹೂಡಿ ತಮ್ಮತಮ್ಮ ಲಾಬಿ ಮುಂದುವರಿಸೇ ಇದ್ದಾರೆ. ಮೊದಲ ಪಟ್ಟಿಯಲ್ಲಿ ಸ್ಥಾನ ಸಿಗದವರು ಎರಡನೇ ಪಟ್ಟಿಗೆ ಕಾಯಬೇಕಾಗಿದೆ.

ಲಕ್ಷ್ಮಣ ಸವದಿ ಅವರ ಹೆಸರು ಮೊದಲ ಪಟ್ಟಿಯಲ್ಲೇ ಇರಲಿದೆ ಎಂಬ ಸುದ್ದಿ ಇತ್ತಾದರೂ ಅದು ಹುಸಿಯಾಗಿದೆ. ಅಶೋಕ ಪಟ್ಟಣ, ಲಕ್ಷ್ಮಿ ಹೆಬ್ಬಾಳಕರ, ಭರಮಗೌಡ (ರಾಜು) ಕಾಗೆ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ ಕೂಡ ಆಕಾಂಕ್ಷಿಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.