ಸವದತ್ತಿ: ಸವದತ್ತಿ ನಾಡಲ್ಲಿ ನಾಲ್ಕು ದಶಕಗಳ ನಂತರ ಜರುಗಲಿರುವ ಗ್ರಾಮದೇವಿಯರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ವಣಗೊಂಡಿವೆ. ಮೇ 4ರಿಂದ 12ರವರೆಗೆ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಗರ ಹಾಗೂ ತಾಲ್ಲೂಕಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಶಾಸಕ ವಿಶ್ವಾಸ ವೈದ್ಯ, ಕಮಿಟಿ ಅಧ್ಯಕ್ಷ ವಿ.ಕೆ. ಮಾಮನಿ, 16 ರೈತ ಕುಟುಂಬಗಳು, ನಾಡಿನ ಪೂಜ್ಯರು, ಗೌಡರು, ಕುಲಕರ್ಣಿ, ಮೇಟಿ, ಬಾಬದಾರರು, ಹಳಬರು ಹಾಗೂ ಸಮಿತಿ ಸದಸ್ಯರ ಶ್ರಮದಿಂದ ಜಾತ್ರೆಯ ರೂಪುರೇಷೆ ಸಿದ್ಧಗೊಂಡಿವೆ. ಇದಕ್ಕೆ ಸಹಕರಿಸಿದ ನಗರದ ಜನರು ಜಾತ್ರೆ ಸಂಭ್ರಮ ಸವಿಯಲು ಕಾತರರಾಗಿದ್ದಾರೆ.

44 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿ ಜಾತ್ರಾ ಮಹೋತ್ಸವವು ಭಕ್ತರಲ್ಲಿ ಅಪಾರ ಉತ್ಸಾಹ ಮತ್ತು ಭಕ್ತಿಭಾವ ಮೂಡಿಸಿದೆ. ದೀರ್ಘ ವಿರಾಮದ ಬಳಿಕ ಜಾತ್ರೆಯನ್ನು ಮರು ಆಯೋಜಿಸಿದ್ದು ಸಂಭ್ರಮ ಇಮ್ಮಡಿಗೊಳಿಸಿದೆ. ಈ ಜಾತ್ರೆ ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯ ಅದ್ಭುತ ಸಂಕೇತವಾಗಿ ಹೊರಹೊಮ್ಮಿದೆ. ದೇವಿ ಅಲಂಕಾರ, ಭಕ್ತಿ ಕಾರ್ಯಕ್ರಮಗಳು ಮತ್ತು ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳಿಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ನಗರದ ಸ್ವಚ್ಛತೆ, ದೇವಿ ಪ್ರಾಂಗಣದ ಸುಸಜ್ಜಿತ ತಯಾರಿ, ವ್ಯವಸ್ಥೆ ಸೇರಿ ಜಾತ್ರೆಗೆ ಆಗಮಿಸುವ ಭಕ್ತರನ್ನು ಸಾಲು ಸಾಲು ಫ್ಲೆಕ್ಸ್, ಬ್ಯಾನರ್ಗಳು ಸ್ವಾಗತಿಸುತ್ತಿವೆ.

ದೇವಸ್ಥಾನವನ್ನು ವೈಭವಪೂರಿತವಾಗಿ ಅಲಂಕರಿಸಲಾಗಿದ್ದು, ವಿಶೇಷ ಪೂಜೆ, ಹೋಮ– ಹವನ ಮತ್ತು ವಿಧಿವತ್ತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ನಿತ್ಯ ಅನ್ನದಾಸೋಹ, ಮನರಂಜನಾ ಚಟುವಟಿಕೆಗಳು ಜಾತ್ರೆಗೆ ಮೆರುಗು ನೀಡಿವೆ. ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸವದತ್ತಿಯ ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಲೋಕಕ್ಕೆ ಪರಿಚಯಿಸಿ ಜನರಲ್ಲಿ ಏಕತೆ, ನಂಬಿಕೆ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಕಾರ್ಯ ನಡೆದಿದೆ. ಕಾಯಿ ಕಟ್ಟುವ ಕಾರ್ಯದಿಂದ ಆರಂಭವಾದ ಸಂತಸದ ಕಾರ್ಯಗಳು ಮನೆಗಳಿಗೆ ಸುಣ್ಣ– ಬಣ್ಣ ಹಚ್ಚಿ ಸಿಂಗರಿಸುವತ್ತ ಸಾಗಿದೆ. ಗ್ರಾಮದೇವಿ ದೇವಸ್ಥಾನ ಹಾಗೂ ಸುತ್ತಲಿನ ಚರಂಡಿ, ರಸ್ತೆಗೆ ಮೊದಲ ಆದ್ಯತೆ ನೀಡಿ ಅಭಿವೃದ್ಧಿಪಡಿಸಲಾಗುತ್ತಿದೆ.

ನಗರದ ಪ್ರತಿ ವಾರ್ಡ್ಗಳಲ್ಲಿನ ಮನೆ, ಅಂಗಡಿ, ಸಂಘ– ಸಂಸ್ಥೆಗಳು ಸೇರಿ ಸಕಲ ಗಣ್ಯರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಪ್ರತಿ ವಾರ್ಡ್ಗಳಿಂದ ಸುಮಾರು ₹10 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹವಾಗಿದ್ದು ವಿಶೇಷ. ಹರಕೆ ಹೊತ್ತವರು ಮತ್ತು ನಗರದಿಂದ ಹೊರಗಿರುವ ಬಂಧು– ಮಿತ್ರರನ್ನು ಜಾತ್ರೆಗೆ ಆಮಂತ್ರಿಸಲಾಗಿದೆ. ದೇವಿಗೆ ಹಣ್ಣು– ಕಾಯಿ ಅರ್ಪಿಸುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಲಿದ್ದಾರೆ.

ರಸ್ತೆಗಳನ್ನೆಲ್ಲ ನಗರಸಭೆಯಿಂದ ಸ್ವಚ್ಛಗೊಳಿಸಿ ಇಕ್ಕಟ್ಟಿನ ರಸ್ತೆಗಳನ್ನು ವಿಸ್ತರಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ನಾಟಕೋತ್ಸವ ಏರ್ಪಡಿಸಲಾಗಿದ್ದು, ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ಜನರಿಗೆ ಮನರಂಜನೆ ನೀಡಲು ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಿವೆ. ದೇವಾಲಯಕ್ಕೆ ವಿದ್ಯುತ್, ಹೂವಿನ ಅಲಂಕಾರ ಮಾಡಲಾಗಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಕಳೆ ತರಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-21-1029429882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.