ಬೆಳಗಾವಿ: ಬೇಸಿಗೆ ರಜೆ ಮುಗಿದು, ಈ ತಿಂಗಳಾಂತ್ಯಕ್ಕೆ ಮತ್ತೆ ಶಾಲೆ ಪುನಾರಂಭವಾಗಲಿವೆ. ಈ ಸಲವೂ ಮೂಲಸೌಕರ್ಯಗಳ ಅಭಾವದ ಜತೆಗೆ, ಶಿಕ್ಷಕರ ಅಭಾವವೂ ವಿದ್ಯಾರ್ಥಿಗಳನ್ನು ಬಿಟ್ಟುಬಿಡದೆ ಕಾಡಲಿದೆ. ಬೆಳಗಾವಿಯೊಂದೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 4,921 ಶಿಕ್ಷಕರ ಹುದ್ದೆ ಖಾಲಿ ಇರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಎರಡು ಶೈಕ್ಷಣಿಕ ಜಿಲ್ಲೆ ಒಳಗೊಂಡಿರುವ ಬೆಳಗಾವಿಯಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ಇಂದು, ನಿನ್ನೆಯಿಂದ ಅಲ್ಲ, ಹಲವು ದಶಕಗಳಿಂದಲೂ ಇದೆ. ವರ್ಗಾವಣೆ, ಸೇವಾನಿವೃತ್ತಿ ಮತ್ತಿತರ ಕಾರಣಗಳಿಂದ ತೆರವಾದ ಹುದ್ದೆಗಳ ಭರ್ತಿಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ.

‘ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅತಿಥಿ ಶಿಕ್ಷಕರನ್ನು ಪ್ರತಿವರ್ಷ ಜುಲೈ, ಆಗಸ್ಟ್ನಲ್ಲಿ ಸರ್ಕಾರ ನೇಮಿಸುತ್ತದೆ. ಅಷ್ಟೊತ್ತಿಗೆ ಶೈಕ್ಷಣಿಕ ವರ್ಷ ಆರಂಭವಾಗಿ ಎರಡ್ಮೂರು ತಿಂಗಳು ಮುಗಿದಿರುತ್ತದೆ. ಹಾಗಾಗಿ 2026–27ನೇ ಸಾಲಿನ ತರಗತಿ ಆರಂಭವಾಗುವ(ಮೇ 29) ಮುನ್ನವೇ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಇಲ್ಲದಿದ್ದರೆ ತ್ವರಿತವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿ, ಮೊದಲ ದಿನದಿಂದಲೇ ಅವರು ಸೇವೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು’ ಎಂಬ ಆಗ್ರಹ ಕೇಳಿಬರುತ್ತಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,358 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 7,957 ಶಿಕ್ಷಕರ ಹುದ್ದೆ ಮಂಜೂರಾಗಿವೆ. ಈ ಪೈಕಿ 6,338 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1,619 ಹುದ್ದೆ ಖಾಲಿ ಇವೆ. 138 ಪ್ರೌಢಶಾಲೆಗಳಲ್ಲಿ 1,404 ಹುದ್ದೆ ಮಂಜೂರಾಗಿದ್ದು, 1,090 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. 314 ಹುದ್ದೆ ಖಾಲಿ ಉಳಿದಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1,682 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 9,211 ಶಿಕ್ಷಕರ ಹುದ್ದೆ ಮಂಜೂರಾಗಿವೆ. ಈ ಪೈಕಿ 6,790 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, 2,421 ಹುದ್ದೆ ಖಾಲಿ ಇವೆ. 232 ಪ್ರೌಢಶಾಲೆಗಳಲ್ಲಿ 1,906 ಶಿಕ್ಷಕರ ಹುದ್ದೆ ಮಂಜೂರಾಗಿದ್ದು, 1,339 ಮಂದಿ ಸೇವೆಯಲ್ಲಿದ್ದಾರೆ. 567 ಹುದ್ದೆ ಖಾಲಿ ಉಳಿದಿವೆ. ಅದರಲ್ಲೂ ಮೂಡಲಗಿ ವಲಯವೊಂದರಲ್ಲೇ ಪ್ರಾಥಮಿಕ ಮತ್ತು ಪ್ರೌಢ ವಿಭಾಗದಲ್ಲಿ ಅತಿಹೆಚ್ಚು(680) ಶಿಕ್ಷಕರ ಹುದ್ದೆ ಖಾಲಿ ಇವೆ.

ಕಲಿಕೆಗೆ ಪೆಟ್ಟು: ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಉಳಿದಿರುವ ಕಾರಣ, ಕರ್ತವ್ಯನಿರತ ಶಿಕ್ಷಕರಿಗೂ ಕಾರ್ಯಭಾರ ಹೆಚ್ಚಿದೆ. ಒಂದು ವಿಷಯದಲ್ಲಿ ಪರಿಣಿತಿ ಗಳಿಸಿದ ಶಿಕ್ಷಕರು, ಅನಿವಾರ್ಯವಾಗಿ ಬೇರೆ ವಿಷಯಗಳನ್ನೂ ಕಲಿಸುತ್ತಿದ್ದಾರೆ. ಇದರಿಂದ ಗುಣಾತ್ಮಕ ಕಲಿಕೆಗೂ ಪೆಟ್ಟು ಬೀಳುತ್ತಿದೆ.

ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಖಾಲಿ ಇರುವ ಹುದ್ದೆಗೆ ಅತಿಥಿ ಶಿಕ್ಷಕರನ್ನು ನೇಮಿಸುತ್ತೇವೆ

–ಲೀಲಾವತಿ ಹಿರೇಮಠ,ಡಿಡಿಪಿಐ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.