ಬೆಳಗಾವಿ: ‘ಜೀವನದ ಅಲ್ಪಾವಧಿಯಲ್ಲಿ ಇಡೀ ದೇಶ ಸಂಚರಿಸಿ ಅದ್ವೈತ ಸಿದ್ಧಾಂತ ಪ್ರತಿಪಾದಿಸಿದ ಶಂಕರಾಚಾರ್ಯರ ಜೀವನ ಇಂದಿನ ಪೀಳಿಗೆಗೆ ಆದರ್ಶ. ಯುವಜನರಲ್ಲಿ ನಮ್ಮ ಪರಂಪರೆ, ಸಂಸ್ಕಾರ, ಧಾರ್ಮಿಕ ಜ್ಞಾನವನ್ನು ಉಳಿಸಲು ಇಂತಹ ಕಾರ್ಯಕ್ರಮಗಳ ಪಾತ್ರ ಬಹು ಮುಖ್ಯ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಮತ್ತು ಶಂಕರಾಚಾರ್ಯ ಸೇವಾ ಸಮಿತಿ ಆಶ್ರಯದಲ್ಲಿ ಮಂಗಳವಾರ ಗುರುಪ್ರಸಾದ ನಗರದ ದತ್ತ ಮಂದಿರದಲ್ಲಿ ಜರುಗಿದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಂಕರಾಚಾರ್ಯರು ಕೇವಲ ಆಚಾರ್ಯರಷ್ಟೇ ಅಲ್ಲದೇ ಮಹಾನ್ ವಿದ್ವಾಂಸರು, ಕವಿಗಳು ಹಾಗೂ ಸಂಗೀತಗಾರರೂ ಆಗಿದ್ದರು. ಆತ್ಮ ಮತ್ತು ಪರಮಾತ್ಮ ಒಂದೇ ಎಂಬ ಅದ್ವೈತ ತತ್ವದ ಮೂಲಕ ಭೇದಭಾವಗಳನ್ನು ಮೀರಿದ ಆಧ್ಯಾತ್ಮಿಕ ಅರಿವು ಮೂಡಿಸಿದರು’ ಎಂದರು.

‘ಇಂದಿನ ಕಾಲದಲ್ಲಿ 25–30 ವರ್ಷಕ್ಕೆ ನಮ್ಮ ಜೀವನದ ದಿಕ್ಕೇನು ಎಂಬ ಗೊಂದಲದಲ್ಲಿ ನಾವಿರುತ್ತೇವೆ. ಆದರೆ ಶಂಕರಾಚಾರ್ಯರು ಆ ವಯಸ್ಸಿನಲ್ಲೇ ದೇಶದ ನಾಲ್ಕೂ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ, ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದರು. ಶೃಂಗೇರಿ, ಪುರಿ, ಬದರಿನಾಥ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸಾಂಸ್ಕೃತಿಕ ಏಕತೆ ತಂದರು’ ಎಂದರು.

ಉಪನ್ಯಾಸ ನೀಡಿದ ಚಿದಾನಂದ ಮುನವಳ್ಳಿ, ‘ಹೆಚ್ಚಿನ ಜ್ಞಾನಕ್ಕಾಗಿ ಗುರುಗಳನ್ನು ಹುಡುಕುತ್ತ ಹೊರಟ ಶಂಕರಾಚಾರ್ಯರು ಲೌಕಿಕ ಜ್ಞಾನದ ಕಡೆ ಹೆಚ್ಚಿನ ಒಲವು ತೋರಿದರು. ಶಂಕರಾಚಾರ್ಯರು ಕೇವಲ ಜ್ಞಾನಿಗಳಲ್ಲದೇ ಸಮಾಜ ಸುಧಾರಣೆಗಾಗಿ ಕ್ರಾಂತಿಕಾರಿಯೂ ಸಹ ಆಗಿದ್ದರು’ ಎಂದರು. ಆಕಾಶವಾಣಿ ದೂರದರ್ಶನ ಕಲಾವಿದ ಶ್ರೀರಂಗ ಜೋಶಿ, ಸಮಾಜದ ಗಣ್ಯರಾದ ಸತ್ಯ ನಾರಾಯಣ ಭಟ್, ರಾಕೇಶ ದೇಶಪಾಂಡೆ, ಅನಂತ ಚಿಂಚನಿ, ಮಾಲತೇಶ ಪಾಟೀಲ, ಕೆ.ಜಿ. ಕುಲಕರ್ಣಿ, ಚಂದ್ರಶೇಖರ ಶಾಸ್ತ್ರಿ ಇತರರು ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-21-971592673

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.