ಬೆಳಗಾವಿ: ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಶಿರಸ್ತೇದಾರ ಸಂಜೀವ ಮುತ್ತೆಪ್ಪಗೋಳ ಅವರ ಎಸ್ಬಿಐ ಖಾತೆ ಹ್ಯಾಕ್ ಮಾಡಿ, ₹90 ಸಾವಿರ ಹಣ ಕಬಳಿಸಿದ ಬಗ್ಗೆ ದೂರು ದಾಖಲಾಗಿದೆ.

ಸಂಜೀವ ಅವರು ಮಾರ್ಚ್ ಬೆಳಗಾವಿ ನಗರದಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಲು ಆನ್ಲೈನ್ನಲ್ಲಿ ಕಾರ್ ಬುಕ್ ಮಾಡಲು ಮುಂದಾಗಿದ್ದರು. ‘ಲಕ್ಷ್ಮೀ ಕಾರ್ ರೆಂಟಲ್ ಗೋವಾ’ ಎಂಬ ವೆಬ್ಸೈಟ್ ಮೂಲಕ ಕಾರ್ ಬುಕ್ ಮಾಡಲು ಮುಂದಾದರು.

ಈ ವೆಬ್ಸೈಟಿಗೆ ಸಂಭಂಧಿಸಿದ ನೀಲಂ ರಜಪೂತ ಎಂಬ ವ್ಯಕ್ತಿ ಕರೆ ಮಾಡಿ ₹800 ಪಾವತಿಸಿ ಕಾರ್ ಬುಕ್ ಮಾಡಬಹುದು ಎಂದು ತಿಳಿಸಿದ. ಅದು ಸಾಧ್ಯವಾಗದಿದ್ದಾಗ ಕಾರ್ ರೆಂಟಲ್ ಎಂಬ ನಕಲಿ ಆ್ಯಪ್ನ ಡೌನ್ಲೋಡ್ ಮಾಡಲು ಆರೋಪಿ ತಿಳಿಸಿದ. ಅದರಲ್ಲೂ ₹149 ಹಣವನ್ನು ಪೋನ್ ಪೇ ಮೂಲಕ ಹಾಕಿದರೂ ಕಾರ್ ಬುಕ್ ಆಗಲಿಲ್ಲ.

ತಾಂತ್ರಿಕ ಕಾರಣವಿದೆ ವಿಡಿಯೊ ಕಾಲ್ ಮಾಡಿ ನಿಮ್ಮ ಫೋನ್ ಸ್ಕ್ರೀನ್ ಶೇರ್ ಮಾಡಿ ಎಂದು ಆರೋಪಿ ಹೇಳಿದ. ಅದರಂತೆ ಸಂಜೀವ ಅವರು ಕೇಳಿದರು. ಅವರ ಅರಿವಿಗೇ ಬಾರದಂತೆ ಅಕೌಂಟಿನಲ್ಲಿದ್ದ ₹90 ಸಾವಿರ ಹಣವನ್ನು ಆರೋಪಿ ಕಬಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-21-1939576342

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.