ಬೆಳಗಾವಿ: ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ, ನಗರದಲ್ಲಿ ಮಂಗಳವಾರ ವೈಭವೋಪೇತ ಮೆರವಣಿಗೆ ನಡೆಯಿತು. ಬೃಹತ್ ಮೆರವಣಿಗೆಯುದ್ದಕ್ಕೂ ಅಪಾರ ಸಂಖ್ಯೆಯ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಧರ್ಮ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಜೈ, ಧರ್ಮವೀರ ಸಂಭಾಜಿ ಮಹಾರಾಜ್ ಕಿ ಜೈ, ಜೈ ಭವಾನಿ– ಜೈ ಶಿವಾಜಿ... ಘೋಷಣೆಗಳು ಮುಗಿಲುಮುಟ್ಟಿದವು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವು ಯುವಕ– ಯುವತಿಯರ ತಂಡಗಳು, ರೂಪಕಗಳು, ನಾಟಕಗಳು ಬೆಳಗಾವಿಯಲ್ಲಿ ನೂಪುರ ಲೋಕವನ್ನೇ ಸೃಷ್ಟಿಸಿದವು.

ಇಲ್ಲಿನ ನರಗುಂದಕರ ಭಾವೆ ಚೌಕ್ನಲ್ಲಿ ಪಲ್ಲಕ್ಕಿಯಲ್ಲಿ ಇರಿಸಿದ್ದ ಶಿವಾಜಿ ಮೂರ್ತಿಗೆ ಮೇಯರ್ ಪ್ರೀತಿ ಕಾಮಕರ ಅವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಸಂಸದ ಜಗದೀಶ ಶೆಟ್ಟರ್, ಶಾಸಕ ಆಸಿಫ್ ಸೇಠ್, ಉಪಮೇಯರ್ ಹಣಮಂತ ಕೊಂಗಾಲಿ, ಮಾಜಿ ಶಾಸಕ ಅನಿಲ ಬೆನಕೆ, ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡರು. ರಮಾಕಾಂತ ಕೊಂಡೂಸ್ಕರ್ ನೇತೃತ್ವದಲ್ಲಿ ಪಲ್ಲಕ್ಕಿ ಹೊತ್ತ ಜನ ಮುಂದೆ ಸಾಗಿದರು.

ಇಳಿಸಂಜೆ ಆಗುತ್ತಿದ್ದಂತೆಯೇ ಮೆರವಣಿಗೆ ಮತ್ತಷ್ಟು ಕಳೆ ಪಡೆಯಿತು. ಮಾರ್ಗದುದ್ದಕ್ಕೂ ಝಗಮಗಿಸುವ ವಿದ್ಯುದ್ದೀಪಾಲಂಕಾರ, ವೃತ್ತ ಹಾಗೂ ನಾಕಾಗಳಲ್ಲಿ ಹಾಕಿದ್ದ ನಾಟಕದ ವೇದಿಕೆಗಳು, ಸಾರ್ವಜನಿಕರು ಕುಳಿತು ವೀಕ್ಷಿಸಲು ಮಾಡಿದ ಆಸನಗಳ ವ್ಯವಸ್ಥೆ ಗಮನಾರ್ಹವಾಗಿದ್ದವು.

ಮೆರವಣಿಗೆ ಮಾರ್ಗ: ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ್, ಹೆಮು ಕೆಲಾನಿ ಚೌಕ್, ಕಪಿಲೇಶ್ವರ ಮೇಲ್ಸೇತುವೆ ಮಾರ್ಗವಾಗಿ ಸಾಗಿತು. ವಿವಿಧ ಕಲಾ ಮಂಡಳದವರು, ಕಲಾವಿದರು ಮತ್ತು ಶಿವಭಕ್ತರು ಭಜನೆ, ನೃತ್ಯ ಮತ್ತಿತರ ಕಲೆ ಪ್ರದರ್ಶಿಸಿ, ಜನರನ್ನು ರಂಜಿಸಿದರು. ಶಿವಾಜಿ ಸೇರಿದಂತೆ ಮಹಾನ್ ನಾಯಕರ ವೇಷದಲ್ಲಿದ್ದ ಮಕ್ಕಳು ಚಕ್ಕಡಿಯಲ್ಲಿ ಸಾಗಿದರು.

ಮೆರವಣಿಗೆಯುದ್ದಕ್ಕೂ ಸಂಗೀತ ವಾದ್ಯಗಳ ಅಬ್ಬರ ಕಂಡುಬಂತು. ಸಿಡಿಮದ್ದು, ಪಟಾಕಿಗಳನ್ನು ಹಾರಿಸಿ ಸಂಭ್ರಮಿಸಲಾಯಿತು. ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಯುವಜನರು ನರ್ತಿಸಿದರು.

ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡರು. ತಡರಾತ್ರಿಯವರೆಗೂ ಮೆರವಣಿಗೆ ಮುಂದುವರಿದಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-21-1310185794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.