ಬೆಳಗಾವಿ: ‘ಅಧಿಕಾರಿ ಸ್ಥಾನಗಳು ಬದಲಾಗಬಹುದು; ಆದರೆ, ಜನಮನದಲ್ಲಿ ಶಾಶ್ವತವಾಗಿ ಉಳಿಯುವ ನಾಯಕನಿಗೆ ವಿದಾಯ ಇರುವುದಿಲ್ಲ’ ಎಂದು ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಮತ್ತು ವ್ಯಕ್ತಿತ್ವ ನೆನೆದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

‘ಮೈಸೂರಿನ ನೆಲದ ಒಂದು ಸಾಮಾನ್ಯ ರೈತ ಕುಟುಂಬದಿಂದ ಹೊರಟು, ಕರ್ನಾಟಕದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದರೂ, ತಮ್ಮ ಅಧಿಕಾರದ ಕೊನೆಯ ಕ್ಷಣದವರೆಗೂ ಬಡವರ, ಹಿಂದುಳಿದವರ, ಶೋಷಿತರ ಮತ್ತು ದುರ್ಬಲರ ಧ್ವನಿಯಾಗಿಯೇ ಉಳಿದವರು ನಮ್ಮೆಲ್ಲರ ಪ್ರೀತಿಯ ನಾಯಕ ಸಿದ್ದರಾಮಯ್ಯ’ ಎಂದಿದ್ದಾರೆ.

‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ ಒಂದು ಹುದ್ದೆಯಿಂದ ಇಳಿಯುವುದು ಮತ್ತು ಜನರ ಹೃದಯದಿಂದ ಇಳಿಯುವುದು ಎರಡು ಬೇರೆ ಸಂಗತಿಗಳು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಜನಪರ ಆಡಳಿತದ ಹೆಸರಿನಲ್ಲಿ ಅವರು ಬರೆದ ಅಧ್ಯಾಯ ಎಂದೆಂದಿಗೂ ಅಳಿಸಲಾಗದಂತಹದ್ದು. ಅವರು ಕೇವಲ ಮುಖ್ಯಮಂತ್ರಿ ಆಗಿರಲಿಲ್ಲ; ಅನೇಕ ಬಡ ಕುಟುಂಬಗಳ ಭರವಸೆ, ಅಸಂಖ್ಯಾತ ಯುವಕರ ಕನಸು, ಕೋಟ್ಯಂತರ ಕನ್ನಡಿಗರ ಆತ್ಮವಿಶ್ವಾಸವಾಗಿದ್ದರು’ ಎಂದು ಲಕ್ಷ್ಮಿ ಹೆಬ್ಬಾಳಕರ್ ಸ್ಮರಿಸಿದ್ದಾರೆ.

‘ನನ್ನ ವೈಯಕ್ತಿಕ ಜೀವನದಲ್ಲೂ ಸಿದ್ದರಾಮಯ್ಯ ಅವರು ಕೇವಲ ರಾಜಕೀಯ ನಾಯಕನಲ್ಲ. ನಾನು ಸಂಕಷ್ಟಗಳನ್ನು ಎದುರಿಸಿದ ಸಂದರ್ಭಗಳಲ್ಲಿ ತಂದೆಯಂತೆ ಬೆನ್ನು ತಟ್ಟಿ ಧೈರ್ಯ ತುಂಬಿದವರು. ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದವರು. ಅವರ ಸಂಪುಟದಲ್ಲಿ ಸಚಿವೆಯಾಗಿ ಕೆಲಸ ಮಾಡುವ ಅವಕಾಶ ನನ್ನ ರಾಜಕೀಯ ಬದುಕಿನ ಅತ್ಯಂತ ಅಮೂಲ್ಯ ಅಧ್ಯಾಯವಾಗಿದೆ. ಅವರ ರಾಜಕೀಯ ದೂರದೃಷ್ಟಿ, ನಿರ್ಧಾರ ಸಾಮರ್ಥ್ಯ ಮತ್ತು ಜನರ ನೋವಿಗೆ ಸ್ಪಂದಿಸುವ ಮನಸ್ಸನ್ನು ಹತ್ತಿರದಿಂದ ಕಂಡು ಕಲಿಯುವ ಅವಕಾಶ ನನಗೆ ದೊರೆತದ್ದು ನನ್ನ ಸೌಭಾಗ್ಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.