ಬೆಳಗಾವಿ: ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣ ಪ್ರದೇಶಗಳಲ್ಲೂ ಬೀದಿನಾಯಿಗಳ ಹಾವಳಿ ಹೇಳತೀರದಾಗಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಈ ಬೀದಿನಾಯಿಗಳ ಉಪಟಳ ನಿಯಂತ್ರಣಕ್ಕೆ ಪ್ರತ್ಯೇಕ ಅನುದಾನ ತೆಗೆದಿಡುವ ಅವಸ್ಥೆ ಬಂದಿದೆ. ಈ ಬಾರಿಯ ಪಾಲಿಕೆ ಬಜೆಟ್ನಲ್ಲಿ ಕೂಡ ₹2 ಕೋಟಿ ಹಣ ನಾಯಿ ಪಾಲಾಗಿದೆ. ಇಷ್ಟಾದರೂ ಬೌಬೌ ಸಂಕಷ್ಟ ಮಾತ್ರ ಪರಿಹಾರವಾಗಿಲ್ಲ.

ಬೆಳಗಾವಿ, ಚಿಕ್ಕೋಡಿ, ಮೂಡಲಗಿ, ರಾಯಬಾಗ, ಅಥಣಿ, ಹುಕ್ಕೇರಿ, ನಿಪ್ಪಾಣಿ ಹಾಗೂ ಗೋಕಾಕ ನಗರಗಳಲ್ಲಿ ಬೀದಿನಾಯಿಗಳ ಕಚ್ಚಿ ಗಾಯಗೊಂಡ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದರೊಂದಿಗೆ ನಾಯಿ ಕಡಿತಕ್ಕೆ ನೀಡಲಾಗುವ ‘ಆ್ಯಂಟಿ ರೇಬಿಸ್’ ಔಷಧಗಳ ಕೊರತೆಯೂ ಕಾಡುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಈ ಚುಚ್ಚುಮದ್ದು ಲಭ್ಯವಿದೆ. ಬಹುಪಾಲು ತಾಲ್ಲೂಕು ಆಸ್ಪತ್ರೆಗಳಲ್ಲಿ ಇಲ್ಲ. ಯಾರಿಗಾದರೂ ನಾಯಿ ಕಚ್ಚಿದರೆ ಖಾಸಗಿ ಆಸ್ಪತ್ರೆ ಅವಲಂಬಿಸಬೇಕು ಅಥವಾ ಜಿಲ್ಲಾಸ್ಪತ್ರೆಗೇ ಬರಬೇಕಾದ ಅನಿವಾರ್ಯವೂ ಉಂಟಾಗಿದೆ.

ಕಳೆದ ವಾರ ಇಬ್ಬರು ಯುವತಿಯರು ರೈಲು ನಿಲ್ದಾಣಕ್ಕೆ ಹೊರಟಿದ್ದಾಗ ಬೀದಿನಾಯಿಗಳ ಹಿಂಡು ಬೆನ್ನಟ್ಟಿ ಬಂತು. ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರೂ ಬಿದ್ದು ಗಾಯಗೊಂಡರು. ಇನ್ನೊಂದೆಡೆ, 12 ಬೀದಿನಾಯಿಗಳ ಹಿಂಡು ಮಕ್ಕಳ ಗುಂಪಿನ ಮೇಲೆ ದಾಳಿ ಮಾಡಿತು. ನಾಲ್ವರು ಕಂದಮ್ಮಗಳು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದರು. ಶಾಹೂನಗರದ ಹಿರಿಯರೊಬ್ಬರು ವಾಯುವಿಹಾರಕ್ಕೆ ಹೊರಟಾಗ ನಾಯಿಗಳ ಹಿಂಡು ಅಟ್ಟಾಡಿಸಿ ಕಚ್ಚಿತು. ಪರಿಣಾಮ ಮಹಿಳೆ ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಾಗಬೇಕಾಯಿತು. ಆಜಮ್ನಗರದಲ್ಲಿ ತರಕಾರಿ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಯ ಬೈಕ್ ಬೆನ್ನಟ್ಟಿದ ನಾಯಿಗಳ ಹಿಂಡು ಅವರನ್ನು ಬೀಳಿಸಿ ಗಾಯಗೊಳ್ಳುವಂತೆ ಮಾಡಿದವು... ಹೀಗೇ ಒಂದಲ್ಲ ಒಂದು ಕಡೆ ದಿನವೂ ಬೀದಿ ನಾಯಿಗಳ ದಾಳಿ ನಡೆಯುತ್ತಲೇ ಇದೆ.

2022ರಿಂದಲೇ ಮಹಾನಗರ ಪಾಲಿಕೆ ‘ಆಪರೇಷನ್ ಡಾಗ್’ ಮುಂದುವರಿಸಿದೆ. ಈಗಲೂ ಅದು ಮುಂದುವರಿದಿದೆ. ಪ್ರತಿವಾರ 200 ನಾಯಿಗಳ ಆಪರೇಷನ್ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡುತ್ತಲೇ ಇದ್ದಾರೆ. ಇದು ಯಶಸ್ವಿಯಾಗಿದ್ದರೆ ನಾಯಿಗಳ ಸಂಖ್ಯೆ ಕಡಿಮೆ ಆಗಬೇಕಿತ್ತು. ಅದಕ್ಕೆ ವಿರುದ್ಧವಾಗಿ ಹೆಚ್ಚುತ್ತಲೇ ಆಗಿದೆ. ಇಲ್ಲಿನ ಜಿಲ್ಲಾಸ್ಪತ್ರೆ, ಕೆೆಎಲ್ಇ ಆಸ್ಪತ್ರೆಗಳಲ್ಲಿ ನಾಯಿ ನಂಜು ನಿವಾರಕ ಇಂಜೆಕ್ಷನ್ ಪಡೆದವರ ಸಂಖ್ಯೆಯೇ ಇದನ್ನು ದೃಢೀಕರಿಸುತ್ತದೆ.

ನಗರದಲ್ಲಿವೆ 27 ಸಾವಿರ ನಾಯಿ: 2024ರ ಜನವರಿಯಿಂದಲೇ ಲೆಕ್ಕ ಹಾಕಿದರೆ ಬರೋಬ್ಬರಿ 27 ಸಾವಿರಕ್ಕೂ ಅಧಿಕ ಬೀದಿನಾಯಿಗಳು ಬೆಳಗಾವಿ ನಗರವೊಂದರಲ್ಲೇ ಇವೆ ಎನ್ನುವುದು ಪಾಲಿಕೆ ಮೂಲಗಳೇ ನೀಡುವ ಮಾಹಿತಿ.

ಕಳೆದ ವರ್ಷ ಇದಕ್ಕಾಗಿ ಐದು ತಂಡಗಳನ್ನು ಸಿದ್ಧ ಮಾಡಲಾಗಿತ್ತು. ಒಂದು ವಾರ ಕಾರ್ಯಾಚರಣೆ ನಡೆಸಿದ ತಂಡಗಳು ಮಾಯವಾದವು. ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಇದರ ಟೆಂಡರ್ ನೀಡಲಾಗಿತ್ತು. ‘ಪೆಟ್ ಟ್ರ್ಯಾಕರ್’ ಬಳಸಿ ನಾಯಿಗಳನ್ನು ಹಿಡಿಯಲಾಗುತ್ತಿತ್ತು. ಈಗಲಾದರೂ ನಾಯಿ ಉಪಟಳ ತಪ್ಪಿತು ಎಂದು ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಆ ನೆಮ್ಮದಿ ಬಹಳ ದಿನ ಉಳಿಯಲಿಲ್ಲ.

ನಗರದಲ್ಲಿ ಸಂತಾನಶಕ್ತಿ ನಿಯಂತ್ರಣ ಚಿಕಿತ್ಸೆ ಮಾಡಲು ಅನಿಮಲ್ ಬರ್ಥ್ ಕಂಟ್ರೋಲ್ ಸೆಂಟರ್ (ಎಬಿಸಿ) ಇದೆ. ಆದರೆ, ಪಾಲಿಕೆ ಆಚೆಗೆ ಇರುವ ನಾಯಿಗಳು ಹೇಳುವವರು, ಕೇಳುವವರೇ ಇಲ್ಲ. ಆಡಿದ್ದೇ ಆಟ– ಬೊಗಳಿದ್ದೇ ನಾದ ಎನ್ನುವಂತಾಗಿದೆ.

ಸಂಖ್ಯೆ ಹೆಚ್ಚಲು ಕಾರಣವೇನು?: 2017ಕ್ಕೂ ಮುನ್ನ ಬೀದಿನಾಯಿಗಳನ್ನು ಹಿಡಿದು ಕಾಡಿನಲ್ಲೋ, ಊರ ಹೊರಗೋ ಬಿಡಲಾಗುತ್ತಿತ್ತು. ಆದರೆ, ಪ್ರಾಣಿಪ್ರಿಯರ ಹೋರಾಟದ ಪರಿಣಾಮ ನಾಯಿಗಳನ್ನು ಕೊಲ್ಲಲು, ಬೇರೆಲ್ಲೋ ಬಿಟ್ಟು ಬರಲುಅವಕಾಶವಿಲ್ಲ. ಅವುಗಳನ್ನು ಹಿಡಿದು ಸಂತಾನ ನಿಯಂತ್ರಣ ಚಿಕಿತ್ಸೆ ನೀಡಬೇಕು. ಬಳಿಕ ಹಿಡಿದ ಸ್ಥಳದಲ್ಲೇ ತಂದು ಬಿಡಬೇಕು ಎಂಬುದು ಕಾನೂನು. ಹೀಗಾಗಿ ಯಾವ ಪ್ರದೇಶದಲ್ಲಿ ನಾಯಿಗಳ ಹಿಂಡು ದೊಡ್ಡದಿದೆಯೋ ಅಲ್ಲಿ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ ಎನ್ನುವುದು ಜನರ ಗೋಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-824807032

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.