ಬೆಳಗಾವಿ: ರಾಜ್ಯದ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ₹4,700 ಕೋಟಿ ಬಿಲ್ ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಇಲ್ಲಿನ ಸಕ್ಕರೆ ಆಯುಕ್ತರ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮುಖಂಡ ಚೂನಪ್ಪ ಪೂಜೇರಿ, ‘ರೈತರು ಕಬ್ಬು ಪೂರೈಸಿದ ₹4,700 ಕೋಟಿ ಬಿಲ್ ಅನ್ನು ಸಕ್ಕರೆ ಕಾರ್ಖಾನೆಗಳು ನೀಡಬೇಕಿದೆ. ಆದರೆ, ದಿನಕ್ಕೊಂದು ನೆಪ ಹೇಳುತ್ತ ಅಲೆದಾಡಿಸುತ್ತಿವೆ’ ಎಂದು ದೂರಿದರು.

‘ಪ್ರತಿ ಟನ್ ಕಬ್ಬಿಗೆ ಸರ್ಕಾರ ₹3,300 ದರ ನಿಗದಿಪಡಿಸಿತ್ತು. ಆದರೆ, ಕಾರ್ಖಾನೆಗಳು ನಿಗದಿಯಂತೆ ದರ ಕೊಟ್ಟಿಲ್ಲ. ಸರ್ಕಾರ ₹300 ಕೋಟಿ ಸಬ್ಸಿಡಿ ನೀಡಿದ್ದರೂ, ಕಾರ್ಖಾನೆಗಳು ರೈತರಿಗೆ ನೀಡದೆ ಮೋಸ ಮಾಡುತ್ತಿವೆ’ ಎಂದು ಆಪಾದಿಸಿದರು.

ತ್ವರಿತವಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ಮಹೇಶ ಸುಬೇದಾರ, ಸೋಮು ಬಿರಾದಾರ, ಈರಣ್ಣ ಸಸಾಲಟ್ಟಿ, ಸಂಗಮೇಶ ಸಾಗರ ಇತರರಿದ್ದರು.

ಪ್ರತಿಭಟನಾ ಸ್ಥಳದಲ್ಲೇ ಅಡುಗೆ ಮಾಡಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.