ಬೆಳಗಾವಿಯಿಂದ ನಾಗಪುರಕ್ಕೆ ವಿಮಾನ ಆರಂಭ

ಬೆಳಗಾವಿ: ಸ್ಟಾರ್ ಏರ್ ಕಂಪನಿಯು ಬೆಳಗಾವಿ–ನಾಗಪುರ– ಬೆಳಗಾವಿ ಮಾರ್ಗದಲ್ಲಿ ವಿಮಾನ ಸೇವೆ ಪ್ರಾರಂಭಿಸಿದೆ.
ವಾರದಲ್ಲಿ 2 ದಿನ ಅಂದರೆ ಮಂಗಳವಾರ ಮತ್ತು ಶನಿವಾರ ವಿಮಾನ ಕಾರ್ಯಾಚರಣೆ ನಡೆಸಲಿದೆ. ಇಲ್ಲಿಂದ ಬೆಳಿಗ್ಗೆ 8.30ಕ್ಕೆ ಹೊರಟು 10ಕ್ಕೆ ನಾಗಪುರ ತಲುಪುವುದು. ಅಲ್ಲಿಂದ 10.30ಕ್ಕೆ ನಿರ್ಗಮಿಸಿ ಮಧ್ಯಾಹ್ನ 12ಕ್ಕೆ ಬೆಳಗಾವಿ (ಸಾಂಬ್ರಾ) ತಲುಪುತ್ತದೆ.
ಉಡಾನ್–3 ಯೋಜನೆಯಲ್ಲಿ ಸೇವೆ ಆರಂಭಿಸಲಾಗಿದೆ. ಸೂರತ್, ಅಹಮದಾಬಾದ್, ಜೋಧಪುರ, ಮುಂಬೈ, ನಾಸಿಕ್, ಇಂದೋರ್ ಹಾಗೂ ತಿರುಪತಿ ನಂತರ 8ನೇ ನಗರ ನಾಗಪುರಕ್ಕೆ ಸ್ಟಾರ್ ಏರ್ ಕಂಪನಿಯು ಇಲ್ಲಿಂದ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ.
‘ನಾಗಪುರಕ್ಕೆ ವಿಮಾನಯಾನ ಸೇವೆ ನೀಡಬೇಕು ಎನ್ನುವುದು ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿತ್ತು. ಇದನ್ನು ಈಡೇರಿಸಿದ್ದು ಸಂತೋಷದ ಸಂಗತಿಯಾಗಿದೆ. ಮತ್ತಷ್ಟು ಹೊಸ ಮಾರ್ಗಗಳಲ್ಲಿ ಇನ್ನೂ ಹಲವು ವಿಮಾನ ಸೇವೆಗಳು ಪ್ರಾರಂಭವಾಗಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದು ಸಂಸದೆ ಮಂಗಲಾ ಅಂಗಡಿ ತಿಳಿಸಿದ್ದಾರೆ.
‘50 ಸೀಟುಗಳ ಈ ವಿಮಾನದಲ್ಲಿ ಮೊದಲ ದಿನವಾದ ಶನಿವಾರ ನಾಗಪುರದಿಂದ 46 ಹಾಗೂ ಇಲ್ಲಿಂದ 50 ಮಂದಿ ಪ್ರಯಾಣಿಸಿದರು. ಇದರೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.