ಬೆಳಗಾವಿ: ‘ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮನೆಗೆ ಎರಡೆರಡು ನಳದ ಸಂಪರ್ಕ ಕೊಟ್ಟಿದ್ದೀರಿ. ದಕ್ಷಿಣ ಕ್ಷೇತ್ರದಲ್ಲಿ ಒಂದು ಸಂಪರ್ಕಕ್ಕೂ ಇಲ್ಲಸಲ್ಲದ ನಿಯಮಗಳನ್ನು ಹೇಳುತ್ತೀರಿ. ಅಲ್ಲಿ ನೀವೇನು ನೀರು ಮಾತ್ರ ಕೊಡುತ್ತಿದ್ದೀರೋ, ಶೆರೆ ಕೂಡ ಕೊಡುತ್ತಿದ್ದೀರೋ...

ನಗರದ ಕುಡಿಯುವ ನೀರು ಹಾಗೂ ರಸ್ತೆ ಸುಧಾರಣೆ ಸಂಬಂಧ ಬುಧವಾರ ಗುಮ್ಮಟಮಾಳದಲ್ಲಿ ನಡೆಸ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಅವರು ಎಲ್ ಆ್ಯಂಡ್ ಟಿ ಹಾಗೂ ಕೆಯುಡಬ್ಲ್ಯುಎಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬಗೆ ಇದು.

‘ದಿನವಿಡೀ (24X7) ನೀರು ಪೂರೈಕೆ ಯೋಜನೆಗಾಗಿ ಕಳೆದ ಆರು ತಿಂಗಳಿಂದ ನಗರದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆಗಳನ್ನು ಅಗೆದುಬಿಟ್ಟಿದ್ದೀರಿ. ಗುಂಡಿಗಳನ್ನು ಹಾಗೇ ಬಿಟ್ಟು ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದೀರಿ. ಮಾತ್ರವಲ್ಲ; ಉತ್ತರ ಕ್ಷೇತ್ರಕ್ಕೆ ಒಂದು ನಿಯಮ ದಕ್ಷಿಣ ಕ್ಷೇತ್ರಕ್ಕೆ ಒಂದು ನಿಯಮ ಮಾಡುತ್ತಿದ್ದೀರಿ’ ಎಂದರು.

ಸಭೆ ಆರಂಭವಾಗುತ್ತಿದ್ದಂತೆಯೇ ಕುಡಿಯುವ ನೀರಿನ ಸಮಸ್ಯೆ, ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ರಸ್ತೆ ದುರಸ್ತಿ ವಿಳಂಬ, ಚರಂಡಿಯಲ್ಲೇ ಪೈಪ್ಲೈನ್ ಅಳವಡಿಕೆ, ನೀರಿನ ಸಂಪರ್ಕ ಗೊಂದಲ, ಹಣ ವಸೂಲಿ... ಹೀಗೆ ಆರೋಪಗಳ ಸುರಿಮಳೆಯೇ ಸುರಿಯಿತು.

ಉತ್ತರ ಕ್ಷೇತ್ರದಲ್ಲಿ ಹೆಚ್ಚು ನಳ ಸಂಪರ್ಕಗಳನ್ನು ನೀಡಿದ ಮಾಹಿತಿ ಸಿಗುತ್ತಿದ್ದಂತೆಯೇ ಶಾಸಕ ಗರಂ ಆದರು. ಅಲ್ಲೇನು ಶೆರೆ ಸರಬರಾಜು ಮಾಡುತ್ತಿದ್ದೀರೇನು ಎಂದೂ ಕಿಡಿ ಕಾರಿದರು.

‘ಪ್ರತಿ ನೀರಿನ ಸಂಪರ್ಕಕ್ಕೆ ₹3 ಸಾವಿರ ವಸೂಲಿ ಮಾಡಲಾಗುತ್ತಿದೆ’ ಎಂಬ ಆರೋಪ ಕೇಳಿ, ಅಭಯ ಪಾಟೀಲ ಕೆಂಡಾಮಂಡಲವಾದರು.

‘ಜನರು ನೀರಿಗಾಗಿ ಹಪಹಪಿಸುತ್ತಿದ್ದಾರೆ. ನೀವು ಕನೆಕ್ಷನ್ ಹೆಸರಿನಲ್ಲಿ ಹಣ ಕೇಳುತ್ತಿದ್ದೀರಾ? ಎರಡು ಕನೆಕ್ಷನ್ ಕೊಡಲು ಶೆರೆ ಕುಡಿದು ಹೋಗ್ತೀರೋ ಏನು? ಸ್ಪಷ್ಟ ಉತ್ತರ ಕೊಡಿ’ ಎಂದೂ ತರಾಟೆಗೆ ತೆಗೆದುಕೊಂಡರು.

‘72 ಸಭೆ ಮಾಡಿದರೂ ಕೆಲಸ ಸರಿಯಾಗಿಲ್ಲ. ಆರು ವರ್ಷಗಳಿಂದ ‘ಪ್ಲ್ಯಾನಿಂಗ್’ ಇಲ್ಲದೇ ಕಾಮಗಾರಿ ಮಾಡುತ್ತಿದ್ದೀರಿ. ಪ್ರತಿವರ್ಷ ಅದೇ ಕಾರಣ, ಅದೇ ನೆಪ, ಅದೇ ಗುಂಡಿ. ಬರೀ ರಸ್ತೆ ತೋಡಿ ಹೋಗುವುದೇ ನಿಮ್ಮ ಕೆಲಸವೇ? ನಿಮ್ಮ ಕೈಲಾದರೆ ಕೆಲಸ ಮಾಡಿ ಇಲ್ಲವೇ ಬಿಟ್ಟು ಹೋಗಿ’ ಎಂದೂ ಎಚ್ಚರಿಕೆ ನೀಡಿದರು.

‘ಗುರುವಾರದೊಳಗೆ ನೀರಿನ ವ್ಯವಸ್ಥೆ ಸರಿಯಾಗಬೇಕು. ಸೋಮವಾರದೊಳಗೆ ರಸ್ತೆ ದುರಸ್ತಿ ಮಾಡಿಸಿ. ಗಟಾರಿನಲ್ಲಿ ಪೈಪ್ಲೈನ್ ಹಾಕಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಜನರ ಸಹನೆಗೆ ಮಿತಿ ಇದೆ. ಇನ್ನು ನಿರ್ಲಕ್ಷ್ಯ ನಡೆದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಶಾಸಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಯಾವುದೇ ಕಾಮಗಾರಿಗೆ ಮುಖ್ಯರಸ್ತೆ ಅಗೆಯಲು ಅವಕಾಶವಿಲ್ಲ. ಒಳರಸ್ತೆಗಳಲ್ಲಿ ಕೆಲಸ ಮಾಡುವ ಮೊದಲು ಸಂಬಂಧಿಸಿದ ನಗರಸೇವಕರ ಅನುಮತಿ ಕಡ್ಡಾಯ. ಕೆಇಬಿ ಹಾಗೂ ಮೇಘಾ ಗ್ಯಾಸ್ ಅಧಿಕಾರಿಗಳಿಗೆ ಮುಂಚಿತ ಮಾಹಿತಿ ನೀಡದೆ ಪೈಪ್ಲೈನ್ ಕಾಮಗಾರಿ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-315380594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.