ಉಪ್ಪಿನಬೆಟಗೇರಿ: ಬೈಕ್ ಹಿಂಬದಿಯಲ್ಲಿ ಕುಳಿತು ಸಾಗುತ್ತಿದ್ದಾಗ ಮಹಿಳೆಯೊಬ್ಬರು ತಲೆ ಸುತ್ತು ಬಂದು ರಸ್ತೆಯ ಮೇಲೆ ಬಿದ್ದು ಮೃತಪಟ್ಟ ಘಟನೆ ಇಲ್ಲಿಯ ಬೈಲಹೊಂಗಲ ರಸ್ತೆಯಲ್ಲಿ ಭಾನುವಾರ ನಡೆದಿದೆ.ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲ್ಲೂಕಿನ ರೈನಾಪುರದ ಸುವರ್ಣ ದುರಗಪ್ಪ ಕೆಳಗೇರಿ (45) ಮೃತರು.

‘ಅದೇ ಗ್ರಾಮದ ಹನಮಂತ ಶ್ಯಾಮಣ್ಣ ಕಾರೆಪ್ಪನವರ (21) ಬೈಕ್ ಚಲಾಯಿಸುತ್ತಿದ್ದ. ವೇಗದ ಚಾಲನೆಯಿಂದಾಗಿ ಮಹಿಳೆಗೆ ತಲೆ ಸುತ್ತು ಬಂದಿದೆ. ಈ ವೇಳೆ ಮಹಿಳೆ ಕೆಳಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ’ ಎಂದು ಪೋಲಿಸರು ತಿಳಿಸಿದರು.ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-24-1199925054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.