ಹುಕ್ಕೇರಿ(ಬೆಳಗಾವಿ ಜಿಲ್ಲೆ): ಕ್ಷತ್ರಿಯ ಜಾತಿಯ ಪ್ರಿಯಕರನ ಜೊತೆ ಸಾಂಗತ್ಯ ಬೆಳೆಸಿದ್ದಕ್ಕೆ ಸಿಟ್ಟಾದ ಕುಟುಂಬಸ್ಥರು, ತಾಲ್ಲೂಕಿನ ನದಿಗುಡಿಕೇತ್ರ ಗ್ರಾಮದ ಹೆಳವರ ಜಾತಿಯ ಮಹಿಳೆಯನ್ನು ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮದಲ್ಲಿ ನಡೆದಿದೆ.

‘ಸತ್ಯವ್ವ ಹೆಳವರ ಕೊಲೆಯಾದವರು. ಸತ್ಯವ್ವ ಸಹೋದರ ಶಾನೂರ ಹೆಳವರ, ಚಿಕ್ಕಪ್ಪ ಪ್ರಕಾಶ ಹೆಳವರ ಮತ್ತು ಸೋದರಮಾವ ಕಲ್ಲಪ್ಪ ಹೆಳವಿ ಬಂಧಿತರು. ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ ಮತ್ತು ತ್ವರಿತವಾಗಿ ಮರಣ ಪ್ರಮಾಣಪತ್ರ ಪಡೆಯಲು ಯತ್ನಿಸಿದ ವೇಳೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹುಕ್ಕೇರಿ ತಾಲ್ಲೂಕಿನ ನದಿಗುಡಿಕೇತ್ರ ಗ್ರಾಮದ ಸತ್ಯವ್ವ ಸಂತೋಷ ಹೆಳವರ ಮತ್ತು ರಾಯಬಾಗ ತಾಲ್ಲೂಕಿನ ಹಣಬರಟ್ಟಿಯ ಸಂತೋಷ ಹೆಳವರ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ನದಿಗುಡಿಯ ಕೃಷ್ಣ ಪಾಟೀಲ ಎಂಬುವರನ್ನು ಸತ್ಯವ್ವ ಪ್ರೀತಿಸುತ್ತಿದ್ದರು. ಪತಿ ಮದ್ಯ ವ್ಯಸನಿಯಾದ ಕಾರಣ, ಸತ್ವವ್ವ ಬೇಸರಗೊಂಡು ಕೃಷ್ಣ ಜೊತೆ ಬೆಳವಾಡಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಕಾಣೆಯಾದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದಿದ್ದಾರೆ.

‘ಕೃಷ್ಣ ಜೊತೆಗಿನ ಸಂಬಂಧ ತೊರೆಯುವಂತೆ ಮನವೊಲಿಸಲು ಮತ್ತು ತಮ್ಮ ಸಮುದಾಯದ ಇನ್ನೊಬ್ಬ ವ್ಯಕ್ತಿ ಜೊತೆ ಸತ್ಯವ್ವ ಮದುವೆ ಮಾಡಿಸಲು ಕುಟುಂಬ ಸದಸ್ಯರು ಯತ್ನಿಸಿದರು. ತೀವ್ರ ನಿಗಾ ಇಟ್ಟರು. ಆದರೂ ಸತ್ಯವ್ವ, ಕೃಷ್ಣ ಜೊತೆ ಹೋಗಿರುವುದಕ್ಕೆ ಕುಟುಂಬಕ್ಕೆ ಕಳಂಕ ಬಂದಿದೆ ಎಂದು ಸಿಟ್ಟಿಗೆದ್ದರು. ಮಾರ್ಚ್ 21ರಂದು ಸತ್ಯವ್ವಗೆ ಬಲವಂತದಿಂದ ವಿಷ ಕುಡಿಸಿ ಹತ್ಯೆ ಮಾಡಿದರು. ಅಂದು ರಾತ್ರಿ ಸಾಕ್ಷ್ಯ ನಾಶಪಡಿಸಲು ಹಾಸಿಗೆ ಮತ್ತು ವಿಷದ ಬಾಟಲಿಯೊಂದಿಗೆ ಅಂತ್ಯಕ್ರಿಯೆ ಮಾಡಿದರು’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-51-245981792

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.