ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವದಲ್ಲಿ ಶುಕ್ರವಾರ ಜಿಲ್ಲಾ ಲೇಖಕಿಯರ ಸಂಘದಿಂದ ದತ್ತಿ ದಾನಿಗಳ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಶಾ ಯಮಕನಮರಡಿ, ‘ಜಿಲ್ಲಾಮಟ್ಟದ ಮಹಿಳಾ ಲೇಖಕಿಯರಿಗೆ ಸಾಹಿತ್ಯ ರಚನೆಯಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಅವರನ್ನು ಬೆಳೆಸಿ, ಸಂಘಟನೆಯೂ ರಾಜ್ಯಮಟ್ಟದ ಪ್ರಶಸ್ತಿ ಕೊಡುವಷ್ಟು ಬೆಳೆದಿದೆ. ಇಲ್ಲಿನ ಲೇಖಕಿಯರ ಸಾಹಿತ್ಯ ಕ್ಷೇತ್ರದಲ್ಲಿ ಮೂಡಿಸಿದ ಹೆಜ್ಜೆ ಗುರುತು ನಿದರ್ಶನವಾಗಿದೆ’ ಎಂದು ಹೇಳಿದರು.

ಅಧ್ಯಕ್ಷೆ ಸುಮಾ ಕಿತ್ತೂರ ಮಾತನಾಡಿದರು.

ಹೇಮಾವತಿ ಸುನೊಳ್ಳಿ ಅವರ ದತ್ತಿ ಪ್ರಶಸ್ತಿ ಮಂಡ್ಯದ ರಂಜಿತಾ ದರ್ಶಿನಿ ಆರ್.ಎಸ್. ಅವರ ‘ಮನಸ್ವಿ’ ಕಾದಂಬರಿಗೆ,, ಜ್ಯೋತಿ ಬದಾಮಿ ಅವರ ಪುಸ್ತಕ ಪ್ರಶಸ್ತಿ ಮಾಲಾ ಅಕ್ಕಿಶೆಟ್ಟಿ ಅವರ ‘ತಿಳಿದು ನಡೆದರೆ’ ಕೃತಿಗೆ, ಶಕುಂತಲಾ ಹಿರೇಮಠ ಅವರ ‘ಚಿಗುರಿದ ಕನಸು’ ಕೃತಿಗೆ ವಿದ್ಯಾ ಹುಂಡೆಕಾರ ಅವರ ಪುಸ್ತಕ ಪ್ರಶಸ್ತಿ, ರೋಹಿಣಿ ಯಾದವಾಡ ಅವರ ಪುಸ್ತಕ ಪ್ರಶಸ್ತಿ ಭವ್ಯ ಸಂಪಗಾರ್ ಅವರ ‘ನಾಳೆಗಳ ನೆಚ್ಚಿ’ ಕೃತಿಗೆ, ಇಂದಿರಾ ಮೋಟೆಬೆನ್ನೂರು ಅವರ ಪುಸ್ತಕ ಪ್ರಶಸ್ತಿ ಶ್ವೇತಾ ನರಗುಂದ ಅವರ ‘ಡೆಡ್ಲೈನ್’ ಮತ್ತು ‘ಡಿನ್ನರ್’ ಕೃತಿಗೆ, ಪ್ರಭಾ ಪಾಟೀಲ ಅವರ ದತ್ತಿ ಪುಸ್ತಕ ಪ್ರಶಸ್ತಿ ನೀತಾರಾವ್ ಅವರ ‘ಶಾಪಗ್ರಸ್ತ ದೇವ ಕನ್ನಿಕೆ’ ಕೃತಿಗೆ ದೊರಕಿತು. ಇಂದಿರಾ ಮೋಟೆಬೆನ್ನೂರ ಅವರ ‘ಎದೆಯ ಬೆಳಕನ್ನರಸುತ್ತ’ ಕೃತಿಗೆ ಸುಧಾ ಪಾಟೀಲ ದತ್ತಿ ಪ್ರಶಸ್ತಿ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-21-1865051530

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.