ಬೆಳಗಾವಿ: ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಯೋಗಾಸನ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು. ವಿವಿಧ ವಯೋಮಾನದ ಹಾಗೂ ಪ್ರದೇಶಗಳ ಯೋಗಾಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಆರೋಗ್ಯ.

ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾವ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ವಿಜಯ ಅಥವಲೆ, ದೈಹಿಕ ಶಿಕ್ಷಣ ನಿರ್ದೇಶಕ ಜಾರ್ಜ್ ರೊಡ್ರಿಗ್ಸ್ ಅತಿಥಿಗಳಾಗಿ ಪಾಲ್ಗೊಂಡರು. ರಾಜೇಂದ್ರ ಬೆಳಗಾವ್ಕರ್ ಅವರು ಯೋಗವು ದೈಹಿಕ ಆರೋಗ್ಯ, ಮಾನಸಿಕ ಸಮತೋಲನ ಹಾಗೂ ಸಮಗ್ರ ಜೀವನಶೈಲಿಗೆ ಅತ್ಯಂತ ಅಗತ್ಯವೆಂದು ತಿಳಿಸಿದರು.

8ರಿಂದ 12 ವರ್ಷ, 13ರಿಂದ 17 ವರ್ಷ, 18ರಿಂದ 24 ವರ್ಷ ಹಾಗೂ 25 ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಗಳು ನಡೆದವು. ಬೆಳಗಾವಿ, ಹುಬ್ಬಳ್ಳಿ, ಗೋಕಾಕ, ದಾವಣಗೆರೆ ಹಾಗೂ ಮುನ್ನೋಳಿಯಿಂದ 85 ಸ್ಪರ್ಧಿಗಳು ಯೋಗ ಕೌಶಲ ಪ್ರದರ್ಶಿಸಿದರು. ಮುರಳಿಧರ ಪ್ರಭು, ರಶ್ಮಿ ಚವಾಣ, ಕುಮಾರಿ ಜೋತ್ಸ್ನಾ, ಕಿಶನ್ ಹಾಗೂ ವಿಶ್ವನಾಥ ಇದ್ದರು. ಪ್ರೊ.ಜಾರ್ಜ್ ರೊಡ್ರಿಗ್ಸ್ ಮಾರ್ಗದರ್ಶನದಲ್ಲಿ ಶುಭಶ್ವಾ ಶಿಕ್ರೆ, ಶಿವಾನಿ ಕರಳೆ, ನಿಕಿತಾ ಪಾಟೀಲ ಹಾಗೂ ಗಿರೀಶ ಕಡಸ್ಕರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-21-557424927

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.