ಬುಧವಾರ, ನವೆಂಬರ್ 25, 2020
22 °C
ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿಗಳ ಸಭೆ

‘ಅನುದಾನ ವಾಪಸಾಗದಂತೆ ನೋಡಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಸಭೆ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಯೋಜನಾ, ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಗಳಿಗೆ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಲಾಯಿತು.

‘ಅನುಮತಿ ಇಲ್ಲದೆ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು’ ಎಂದು ಸದಸ್ಯರಾದ ಶಿವನಿಂಗ ದಾಶ್ಯಾಳ ಹಾಗೂ ಜೀತೇಂದ್ರ ಟೋಪಣ್ಣ ಮಾದಾರ ಮುಖ್ಯ ಲೆಕ್ಕಾಧಿಕಾರಿ ಪರುಶುರಾಮ ದುಡಗುಂಟಿ ಅವರಿಗೆ ಸೂಚಿಸಿದರು. ಪ್ರಗತಿ ಪರಿಶೀಲನಾ ವರದಿ ಪುಸ್ತಕವನ್ನು ಸಭೆಯ ನೋಟಿಸ್‌ನಲ್ಲಿ ತಿಳಿಸಿರುವ ದಿನಾಂಕದೊಳಗೆ ನೇರವಾಗಿ ಸದಸ್ಯರಿಗೂ ಒಂದು ಪ್ರತಿ ತಲುಪಿಸುವ ವ್ಯವಸ್ಥೆ ಕಟ್ಟುನಿಟ್ಟಾಗಿ ಮಾಡಬೇಕು ಎಂದು ತಿಳಿಸಿದರು.

ಖಜಾನೆ ಇಲಾಖೆಯ ಜಂಟಿ ನಿರ್ದೇಶಕ ಎಸ್.ವಿ. ಹಲ್ಯಾಳ, ಅನುದಾನ ಸರ್ಕಾರಕ್ಕೆ ವಾಪಸಾಗಲು ಕಾರಣಗಳೇನು ಎನ್ನುವುದನ್ನು ತಿಳಿಸಿದರು.

‘ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು’ ಎಂದು ಅಧ್ಯಕ್ಷರು ಸೂಚಿಸಿದರು.

‘ಸಂಬಂಧಿಸಿದ ಇಲಾಖೆಯವರು ನಿಗದಿತ ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಮುಖ್ಯ ಲೆಕ್ಕಾಧಿಕಾರಿ ಮಾತನಾಡಿ, ‘ನಿಗದಿತ ಅವಧಿಯಲ್ಲಿ ಬಿಲ್ಲುಗಳನ್ನು ಸರಿಯಾದ ದಾಖಲೆಯೊಂದಿಗೆ ಹಾಗೂ ಪೂರ್ಣ ರೀತಿಯಲ್ಲಿ ಸಲ್ಲಿಸಲು ಎಲ್ಲ ಅನುಷ್ಠಾನಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಳಂಬವಾಗಿ ಸಲ್ಲಿಸುವ ಬಿಲ್ಲುಗಳನ್ನು ತಿರಸ್ಕರಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.