ಬೆಳಗಾವಿ: ಇಲ್ಲಿನ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯವು ಬೇಸಿಗೆಯಲ್ಲೂ ದಟ್ಟ ಹಸಿರಿನಿಂದ ಕೂಡಿದೆ. ಪ್ರಾಣಿಪಕ್ಷಿಗಳನ್ನು ಉರಿಬಿಸಿಲಿನಿಂದ ರಕ್ಷಿಸಲು ಅರಣ್ಯ ಇಲಾಖೆ ವಿಶೇಷ ಪ್ರಯತ್ನ ನಡೆಸಿದೆ.

37 ಹೆಕ್ಟೇರ್ ವಿಶಾಲವಾದ ಈ ಮೃಗಾಲಯದಲ್ಲಿ ಪ್ರಾಣಿ ಪಕ್ಷಿ ಪ್ರಭೇದಗಳು ಸೇರಿ 300ಕ್ಕೂ ಹೆಚ್ಚು ಜೀವಿಗಳಿವೆ. ನೀರಿಗಾಗಿ ಎರಡು ತೆರೆದ ಬಾವಿಗಳಿದ್ದು, ಮೂರು ಬೋರ್ವೆಲ್ ಕೊರೆಸಲಾಗಿದೆ. ಎಲ್ಲದರಲ್ಲೂ ಸಾಕಷ್ಟು ಪ್ರಮಾಣದ ನೀರಿದೆ. ಎರಡು ಕೆರೆಗಳಿದ್ದು, ಮಳೆಗಾಲದ ನೀರು ಇನ್ನೂ ಇದೆ. ಮೃಗಗಳಿಗೆ ಸಾಕಾಗಿ, ಹೆಚ್ಚುವರಿ ನೀರನ್ನು ಮಕ್ಕಳ ಕಾರಂಜಿಗೂ ಬಳಸುತ್ತಿರುವುದು ವಿಶೇಷ.

ಈ ಪ್ರದೇಶದಲ್ಲಿ ಈಗ ಕನಿಷ್ಠ 22 ಡಿಗ್ರಿಯಿಂದ ಗರಿಷ್ಠ 39 ಡಿಗ್ರಿ ಉಷ್ಣಾಂಶ ಇದೆ. ಮೃಗಾಲಯದ ಸುತ್ತ ಗುಡ್ಡ ಇರುವುದರಿಂದ ಬಿಸಿಗಾಳಿ ಹೆಚ್ಚು. ಪ್ರಾಣಿಪಕ್ಷಿಗಳು ಹೈರಾಣಾಗುವುದನ್ನು ತಡೆಯಲು ಇಡೀ ಮೃಗಾಲಯದಲ್ಲಿ ಸ್ಪ್ರಿಂಕ್ಲರ್ ಅಳವಡಿಸಿ, ನೀರು ಚಿಮ್ಮಿಸಲಾಗುತ್ತಿದೆ.

ಎರಡು ಹುಲಿಗಳು, ಎರಡು ಸಿಂಹಗಳು, ಎರಡು ಕರಡಿಗಳು, ಮೂರು ಚಿರತೆಗಳು, ಕೃಷ್ಣಮೃಗಗಳ ಹಿಂಡು, ಚುಕ್ಕೆ ಜಿಂಕೆ ಹಿಂಡು, ಕಾಡುಕೋಣಗಳ ಹಿಂಡು ಇಂಥ ದೊಡ್ಡ ಪ್ರಾಣಗಳ ವಿಭಾಗಗಳಲ್ಲಿ ಎತ್ತರದಲ್ಲಿ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ಮಳೆ ಹನಿಗಳ ರೀತಿ ನೀರು ಸಿಂಪಡಿಸಲಾಗುತ್ತದೆ. ನೀರು ಸಿಂಪಡಣೆ ವೇಳೆಗೆ ಮೃಗಗಳು ಬಂದು ಅದರ ಕೆಳಗೆ ನಿಂತು ತಣ್ಣೀರ ಆನಂದ ಅನುಭವಿಸುತ್ತವೆ. ಇದಲ್ಲದೇ, ಸಿಬ್ಬಂದಿಯೇ ಪೈಪ್ ಹಿಡಿದು ಹತ್ತಿರ ಹೋದರೆ ಓಡೋಡಿ ಬರುವ ಪ್ರಾಣಿಗಳು ಮೈಯೊಡ್ಡುತ್ತವೆ.

ಸಣ್ಣಸಣ್ಣ ಹೊಂಡಗಳನ್ನು ಮಾಡಿ ನೀರು ತುಂಬಿಸಿದ್ದು, ಈ ನೀರು ಬಿಸಿಯಾದರೆ ಪ್ರಾಣಿಗಳು ಕುಡಿಯುವುದಿಲ್ಲ. ಪರಿಹಾರವಾಗಿ, ಅವುಗಳ ಒಳಗೆ ಮಂಜುಗಡ್ಡೆ ಹಾಕಲಾಗುತ್ತದೆ. ಹುಲಿ– ಸಿಂಹ, ಕರಡಿಗಳು, ಮೊಸಳೆಗಳು ಈ ಹೊಂಡಗಳಲ್ಲಿ ಮಲಗಿ ವಿಶ್ರಾಂತಿ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಗಳು ಆಶ್ರಯ ಪಡೆಯುವ ಕೊಠಡಿ, ಪಂಜರ, ಕಟ್ಟೆಗಳ ಮೇಲೂ ಮಂಜು ಗಡ್ಡೆ ಇಡಲಾಗುತ್ತದೆ. ಅವುಗಳನ್ನು ನೆಕ್ಕಿ, ಕಾಲಲ್ಲಿ ತುಳಿದಾಡಿ ಆಟವಾಡುವ ದೃಶ್ಯ ನೋಡುವುದೇ ಚಂದ.

ಇದೇ ಮಾದರಿಯ ಕಾರಂಜಿಗಳನ್ನು ಪಕ್ಷಿಗಳ ಪಂಜರಗಳಲ್ಲೂ ಅಳವಡಿಸಲಾಗಿದೆ. ಕೆಲಗಡೆ ಚಿಕ್ಕ ಹೊಂಡಗಳನ್ನು ಮಾಡಿ ನೀರು ತುಂಬಿಸಿದ್ದರಿಂದ ನವಿಲು, ಕೋಳಿಯಂಥ ಹಕ್ಕಿಗಳು ಅದರಲ್ಲಿ ಹೊರಳಾಡಿ ತಮ್ಮ ದೇಹದ ತಾಪಮಾಣ ಸರಿದೂಗಿಸಿಕೊಳ್ಳುತ್ತಿವೆ.

ಈಗ ಶಾಲೆ, ಕಾಲೇಜುಗಳಿಗೆ ರಜೆ ಇರುವ ಕಾರಣ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಕಳೆದ ಬಾರಿಯ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ₹60 ಲಕ್ಷ ಆದಾಯ ಬಂದಿತ್ತು. ಈ ಬಾರಿ ಅದನ್ನು ಮೀರಿಸುವಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎಂಬುದು ಮೃಗಾಲಯ ಅಧಿಕಾರಿಗಳ ಮಾಹಿತಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-1056798764

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.