ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದ ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಅವರ ದೇಹದ ಅಂಗಾಂಗಗಳನ್ನು , ಅಧಿಕಾರಿಗಳು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದರು. ಮಗನ ಸುಟ್ಟುಹೋದ ದೇಹದ ಅಲ್ಪಸ್ವಲ್ಪ ಅಂಗಾಂಗಗಳನ್ನು ತಂದೆ ಸಣ್ಣಗೌಡ ಅವರು, ಸಂತೆಗೆ ಬಳಸುತ್ತಿದ್ದ ಕೈಚೀಲದಲ್ಲಿ ಹಾಕಿಕೊಂಡು ಮನೆ ಕಡೆಗೆ ಹೊರಟರು. ದಾರಿಯುದ್ದಕ್ಕೂ ಇನ್ನಿಲ್ಲದಂತೆ ದುಃಖಿಸುತ್ತಿದ್ದ ಅವರ ಪರಿಸ್ಥಿತಿಗೆ ಮರುಗದವರೇ ಇಲ್ಲ.