ಬುಧವಾರ, ಅಕ್ಟೋಬರ್ 16, 2019
27 °C

ಬೆನಕನಹಳ್ಳಿ: ಕ್ರಿಕೆಟ್ ಟೂರ್ನಿಗೆ ಚಾಲನೆ

Published:
Updated:
Prajavani

ಬೆಳಗಾವಿ: ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಿರುವ ‘ಬೆನಕನಹಳ್ಳಿ ಪ್ರೀಮಿಯರ್ ಲೀಗ್‌’ (ಬಿಪಿಎಲ್‌) ಕ್ರಿಕೆಟ್ ಟೂರ್ನಿಯನ್ನು ಬಿಜೆಪಿ ಮುಖಂಡ ಸಂಜಯ ಪಾಟೀಲ ಉದ್ಘಾಟಿಸಿದರು.

ನಂತರ ಮಾತನಾಡಿ, ‘ಯುವಕರು ಸದೃಢ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈನಾಜಬೇಗಂ ಎಂ. ದರ್ಗಾ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ರಂಜನಾ ಕೋಲಕಾರ, ಮುಖಂಡರಾದ ಯಲ್ಲಪ್ಪ ಚಿಕ್ಕಲಕರ, ಉಮೇಶ ಚೋಪಡೆ, ವಿಠ್ಠಲ ಪಾಟೀಲ, ಮಾರುತಿ ದೇಸೂರಕರ, ಮಹೇಶ ಪಾಟೀಲ, ರಾಮಚಂದ್ರ ಮನ್ನೋಳಕರ, ಮಾರುತಿ ಪಾಟೀಲ, ರಾಮಾ ಗಾವಡು ಪಾಟೀಲ, ಲಕ್ಷ್ಮಣ ದೇಸೂರಕರ, ಕಲ್ಲಪ್ಪಾ ದೇಸೂರಕರ, ಮದನ ಪಾಟೀಲ, ನಾಗೇಶ ಪರಶರಾಮ ಜಾಧವ, ಜೋತಿಬಾ ರಮೇಶ ಮಂಡಲೀಕ, ಪರಶುರಾಮ ಗುರುನಾಥ ದೇಸೂರಕರ, ಚನ್ನಪ್ಪ ಶಿವಾಜಿ ಪಾಟೀಲ, ಕೃಷ್ಣ ತಾನಾಜಿ ಕಾಟಕರ, ರಾಮ ಗಾವಡು ಪಾಟೀಲ, ರಾಜು ಪಾಟೀಲ ಇದ್ದರು.

Post Comments (+)