ಬೆಳಗಾವಿ: ‘ಬೆಂಗಳೂರು– ಬೆಳಗಾವಿ– ಲೋಕಮಾನ್ಯ ತಿಲಕ ಟರ್ಮಿನಲ್ (ಸಂಖ್ಯೆ: 1653 ಪ್ರತಿ ಶನಿವಾರ ಮತ್ತು ಮಂಗಳವಾರ) ಹಾಗೂ ಲೋಕಮಾನ್ಯ ತಿಲಕ ಟರ್ಮಿನಲ್– ಬೆಳಗಾವಿ– ಬೆಂಗಳೂರು (ಸಂಖ್ಯೆ 16554 ಪ್ರತಿ ಭಾನುವಾರ ಮತ್ತು ಬುಧವಾರ) ನೂತನ ಸಪ್ತಾಹಿಕ ಎಕ್ಸಪ್ರೆಸ್ ರೈಲಗಳ ಸಂಚಾರ ಪ್ರಾರಂಭಿಸಲಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಪ್ರಸ್ತಾಪಿತ ರೈಲುಗಳು ಅನುಕ್ರಮವಾಗಿ ಮೇ 23ರಂದು ಬೆಂಗಳೂರನಿಂದ ಹಾಗೂ ಮೇ 24ರಂದು ಲೋಕಮಾನ್ಯ ತಿಲಕ ಟರ್ಮಿನಲ್ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿದೆ.

ಈ ರೈಲು ಬೆಂಗಳೂರಿನಿಂದ ರಾತ್ರಿ 8.35 ಕ್ಕೆ ಹೊರಟು ಮರುದಿನ ಬೆಳಗಾವಿಗೆ ಬೆಳ್ಳಿಗ್ಗೆ 6.45ಕ್ಕೆ ಅಗಮಿಸಿ ತದನಂತರ ಲೋಕಮಾನ್ಯ ತಿಲಕ ಟರ್ಮಿನಲ್ ರೈಲು ನಿಲ್ದಾಣವನ್ನು ಅದೇ ದಿನ ರಾತ್ರಿ 8.40ಕ್ಕೆ ತಲುಪುತ್ತವೆ.

ಅದರಂತೆ ಲೋಕಮಾನ್ಯ ತಿಲಕ ಟರ್ಮಿನಲ್ ನಿಲ್ದಾಣದಿಂದ ಆಯ್ದ ವಾರದಂದು ರಾತ್ರಿ 11.15ಕ್ಕೆ ಬಿಟ್ಟು ಬೆಳಗಾವಿಯನ್ನು ಮರುದಿನ ಬೆಳ್ಳಿಗ್ಗೆ 11.50ಕ್ಕೆ ತಲುಪಿ, ತದನಂತರ ಬೆಂಗಳೂರನ್ನು ಅದೇ ದಿನ ರಾತ್ರಿ 10.30ಕ್ಕೆ ತಲುಪುತ್ತವೆ ಎಂದು ವಿವರಿಸಿದ್ದಾರೆ.

ಮೂರು ನಗರಗಳಿಗೆ ರೈಲು: ಬೆಳಗಾವಿ– ಹೈದರಾಬಾದ್ (ಸಂಖ್ಯೆ : 17071 / 17072 ), ಬೆಳಗಾವಿ– ಸಿಕಂದರಾಬಾದ್ ( ಸಂಖ್ಯೆ : 17073 / 17074 ) ಹಾಗೂ ಬೆಳಗಾವಿ –ಚಾರ್ಲಪಲ್ಲಿ ( ಸಂಖ್ಯೆ 17075 / 17076) ನಗರಗಳ ನಡುವೆ ಮೂರು ನೂತನ ಸಪ್ತಾಹಿಕ ಎಕ್ಸಪ್ರೆಸ್ ರೈಲಗಳು ಸಂಚಾರ ಪ್ರಾರಂಭಿಸಲಿವೆ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಈ ಮೂರು ರೈಲುಗಳು ಸಪ್ತಾಹಿಕ ಎಕ್ಸಪ್ರೆಸ್ ರೈಲಗಳಾಗಿದ್ದು ಬೆಳಗಾವಿ ನಗರದಿಂದ ಅನುಕ್ರಮವಾಗಿ ಪ್ರತಿ ಶುಕ್ರವಾರ, ಮಂಗಳವಾರ ಹಾಗೂ ಭಾನುವಾರದಂದು ಮಧ್ಯಾಹ್ನ 1 ಗಂಟೆಗೆ ಹೊರಟು ಅನುಕ್ರಮವಾಗಿ ಹೈದರಾಬಾದ್ ನಗರವನ್ನು ಶನಿವಾರ ಬೆಳ್ಳಿಗ್ಗೆ 7 ಗಂಟೆಗೆ, ಸಿಕಂದರಾಬಾದ್ ಬುಧವಾರ ಬೆಳ್ಳಿಗ್ಗೆ 7:15ಕ್ಕೆ ಮತ್ತು ಚಾರ್ಲುಪಲ್ಲಿ ನಗರವನ್ನು ಸೋಮವಾರ 8.45ಕ್ಕೆ ತಲುಪುವುದು.

ಮರಳಿ ಹೈದರಾಬಾದ್– ಬೆಳಗಾವಿ ರೈಲು ಹೈದರಾಬಾದ್ ನಗರದಿಂದ ಗುರುವಾರ ಸಂಜೆ 4.30ಕ್ಕೆ ಹೊರಟು ಬೆಳಗಾವಿಯನ್ನು ಶುಕ್ರವಾರ ಬೆಳ್ಳಿಗ್ಗೆ 10.30ಕ್ಕೆ ತಲುಪುವುದು, ಸಿಕಂದರಾಬಾದ - ಬೆಳಗಾವಿ ರೈಲು ಸಿಕಂದರಾಬಾದ ನಗರದಿಂದ ಸೋಮವಾರ ಸಾಯಂಕಾಲ 4.30ಕ್ಕೆ ಹೊರಟು ಬೆಳಗಾವಿಯನ್ನು ಮಂಗಳವಾರ 10.30ಕ್ಕೆ ತಲಪುವದು ಹಾಗೂ ಚಾರ್ಲಪಲ್ಲಿ - ಬೆಳಗಾವಿ ರೈಲು ಚಾರ್ಲಪಲ್ಲಿ ನಗರದಿಂದ ಶನಿವಾರ ಸಾಯಂಕಾಲ 4ಕ್ಕೆ ಹೊರಟು ಬೆಳಗಾವಿಯನ್ನು ಭಾನುವಾರ ಬೆಳಿಗ್ಗೆ 10.30 ತಲುಪುವುದು. ಮೇ 17 ಮತ್ತು 19ರಂದು ಮಧ್ಯಾಹ್ನ 1 ಗಂಟೆಗೆ ರೈಲು ಸಂಚಾರಕ್ಕೆ ಶೆಟ್ಟರ್ ಹಸಿರು ನಿಶಾನೆ ತೊರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-21-121388803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.