ಬೆಳಗಾವಿ: ಉಡುಪಿಯ ಭಂಡಾರಕೇರಿ ಮಠದ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ (ಒಆರ್ಐ) ಸೇರಿದಂತೆ ಮೂವರು ವಿದ್ವಾಂಸರಿಗೆ ಪ್ರದಾನ ಮಾಡಲಾಯಿತು.

ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 82ನೇ ಅಧಿವೇಶನ, ವೇದವ್ಯಾಸ ಜಯಂತಿ ಮತ್ತು ವಿದ್ಯಾಮಾನ್ಯ ತೀರ್ಥರ 25ನೇ ಆರಾಧನೋತ್ಸವ ಅಂಗವಾವಿ ನಗರದ ವೇಣುಗೋಪಾಲ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ ಅವರು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಿ.ಪಿ. ಮಧುಸೂದನಾಚಾರ್ಯ ಅವರಿಗೆ ‘ವೇದಪೀಠ’ ಪ್ರಶಸ್ತಿಯನ್ನು ₹1 ಲಕ್ಷ ನಗದು, ಸನ್ಮಾನಪತ್ರ, ಸ್ಮರಣಿಕೆ ಸಮೇತ ಪ್ರದಾನ ಮಾಡಿದರು.

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಹಿರಿಯ ಪ್ರಾಧ್ಯಾಪಕ ವೆಂಕಟೇಶ ಬಾಯರಿ ಅವರಿಗೆ ‘ಶ್ರೀ ಸತ್ಯತೀರ್ಥ ಅನುಗ್ರಹ’ ಪ್ರಶಸ್ತಿ, ಬೆಳಗಾವಿಯ ವಿಶ್ವ ಮಧ್ವ ಮಹಾಪರಿಷತ್ ಸಂಚಾಲಕ ಪಂಡಿತ ಕಟ್ಟಿ ಪ್ರಮೋದಾಚಾರ್ಯ ಅವರಿಗೆ ‘ಶ್ರೀ ರಾಜವಿದ್ಯಾಮಾನ್ಯ’ ಪ್ರಶಸ್ತಿ ಮತ್ತು ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಯುವ ವಿದ್ವಾಂಸ ಶಶಿಧರ ಆಚಾರ್ಯರಿಗೆ ‘ಶ್ರೀ ರಾಜಹಂಸ ಪ್ರಶಸ್ತಿ’ ನೀಡಲಾಯಿತು. ಈ ಮೂರೂ ಪ್ರಶಸ್ತಿಗಳು ತಲಾ ₹50 ಸಾವಿರ ನಗದು, ಸ್ಮರಣಿಕೆ ಹೊಂದಿವೆ.

ಪ್ರವಚನಕಾರ ವ್ಯಾಸನಕೆರೆ ಪ್ರಭಂಜನಾಚಾರ್ಯ, ಪಂಡಿತರಾದ ಗುರುರಾಜಾಚಾರ್ಯ ಜೋಷಿ, ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ, ವಿದುಷಿ ಶುಭಾ ಸಂತೋಷ, ಪಂಡಿತ ಬದರೀನಾಥಾಚಾರ್ಯ, ಶ್ರೀನಿಧಿ ವಾಸಿಷ್ಠ, ರಮೇಶ ಇತರರು ವೇದಿಕೆ ಮೇಲಿದ್ದರು.

ವೇದವ್ಯಾಸರ ಗ್ರಂಥಗಳಿಗೆ ನಾಣ್ಯ ತುಲಾಭಾರ ಮಾಡಿದ ವಿದ್ಯೇಶತೀರ್ಥ ಸ್ವಾಮೀಜಿ ಭಕ್ತರಿಗೆ ಫಲ ಮಂತ್ರಾಕ್ಷತೆ ಸಹಿತ ನಾಣ್ಯಗಳನ್ನೂ ನೀಡಿದರು.

ಸನಾತನ ಭಾರತೀಯ ಪರಂಪರೆ ಉಳಿಯಬೇಕು. ವಿಶ್ವಕ್ಕೆ ಬೆಳಕು ನೀಡಬೇಕು. ಈ ನಿಟ್ಟಿನಲ್ಲಿ ಮಾಧ್ವ ರಾದ್ಧಾಂತ ಸಂವರ್ಧಕಸಭಾ 82ನೇ ಅಧಿವೇಶನ ಸಾರ್ಥಕತೆ ಮೆರೆದಿದೆ.
–ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ

ವೇದ– ಶಾಸ್ತ್ರಾಧ್ಯಯನ ಮಾಡುವ ಪಂಡಿತರಿಗೆ ಪ್ರತಿಭೆಗಳಿಗೆ ಗೌರವಿಸುವ ಪರಿಪಾಠವನ್ನು ವಿದ್ಯಾಮಾನ್ಯತೀರ್ಥರು 81 ವರ್ಷಗಳ ಹಿಂದೆಯೇ ಚಾಲನೆಗೊಳಿಸಿದ್ದರು.
–ವಿದ್ಯೇಶತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.