ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಒಗ್ಗೂಡಿಸಿ ಯಾತ್ರೆಗೆ 5ಸಾವಿರ ಜನ: ಲಕ್ಷ್ಮೀ ಹೆಬ್ಬಾಳಕರ

Last Updated 9 ಸೆಪ್ಟೆಂಬರ್ 2022, 3:15 IST
ಅಕ್ಷರ ಗಾತ್ರ

ಬೆಳಗಾವಿ: ದೇಶದಲ್ಲಿ ಜಾತಿ, ಧರ್ಮಗಳ ವಿಷಬೀಜವನ್ನು ಕಿತ್ತೊಗೆದು ಸಮನ್ವಯತೆ ಹುಟ್ಟುಹಾಕುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ‘ಭಾರತ ಒಗ್ಗೂಡಿಸಿ’ ಪಾದಯಾತ್ರೆ ಹಮ್ಮಿಕೊಂಡಿದ್ದು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶದಲ್ಲಿ ಇದು ಆರಂಭವಾಗಿದೆ. ನಮ್ಮದು ಶಾಂತಿಪ್ರಿಯ ದೇಶ. ಇಲ್ಲಿ ವಿವಿಧ ಭಾಷೆಗಳು, ಜನಾಂಗಗಳು, ಧರ್ಮಗಳ ಜನರಿದ್ದರೂ ನಾವು ಒಂದೇ ಎಂದು ಸಾರುವ ದೇಶವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಜಾತಿ, ಧರ್ಮಗಳ ಸಂಘರ್ಷ, ಒಡೆದಾಳುವ ನೀತಿ ಇತ್ಯಾದಿಗಳನ್ನು ಕಿತ್ತೆಸೆದು ನಾವು ಭಾರತೀಯರೆಲ್ಲ ಒಂದೇ ಎನ್ನುವ ಭಾವ ಹುಟ್ಟಿಸುವುದು ಯಾತ್ರೆಯ ಮುಖ್ಯ ಉದ್ದೇಶ ಎಂದು ಮಾಧ್ಯಮಗಳಿಗೆ ಹೇಳಿದರು.

ಇಲ್ಲಿನ ನಾಲ್ವರು ಶಾಸಕರಿಗೆ ಇದರ ಜವಾಬ್ದಾರಿ ವಹಿಸಿದ್ದು ತಾವು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಬೆಳಗಾವಿ ಹಾಗೂ ಯಮಕನಮರಡಿ ಕ್ಷೇತ್ರದಿಂದ ಯುವಕರು, ಮಹಿಳೆಯರು ಸೇರಿದಂತೆ ತಲಾ 5 ಸಾವಿರ ಜನ ಮೊಳಕಾಲ್ಮೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ

ಭಾಗವಹಿಸುತ್ತಿರುವುದಾಗಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT