ಭಾನುವಾರ, ಮಾರ್ಚ್ 7, 2021
30 °C

‘ಭಾರತ ಹುಣ್ಣಿಮೆ’ ಜಾತ್ರೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗರಗೋಳ (ಸವದತ್ತಿ ತಾ.): ‘ಕೋವಿಡ್ ಹರಡುವಿಕೆ ನಿಯಂತ್ರಣದ ದೃಷ್ಟಿಯಿಂದ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಮತ್ತು ಜೋಗುಳಬಾವಿ ಸತ್ಯೆಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಫೆ. 27ರಂದು ಯಲ್ಲಮ್ಮನಗುಡ್ಡದಲ್ಲಿ ನಡೆಯಬೇಕಿದ್ದ ‘ಭಾರತ ಹುಣ್ಣಿಮೆ’ ಜಾತ್ರೆ ರದ್ದುಪಡಿಸಲಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.

‘ಭಕ್ತರು ಯಲ್ಲಮ್ಮನಗುಡ್ಡಕ್ಕೆ ಬಾರದೆ, ಮನೆಯಲ್ಲೇ ದೇವಿಯನ್ನು ಆರಾಧಿಸಬೇಕು. ಸಕಲ ಜೀವರಾಶಿಯ ಒಳಿತಿಗೆ ಪ್ರಾರ್ಥಿಸಬೇಕು. ಮುಂದಿನ ಆದೇಶದವರೆಗೂ ದೇವಸ್ಥಾನಕ್ಕೆ ಬಾರದೆ ಸಹಕರಿಸಬೇಕು’ ಎಂದು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು