ಅಥಣಿ: ಯೋಗ ಜಾಗೃತಿಗೆ ಬೈಕ್ ಜಾಥಾ

ಶುಕ್ರವಾರ, ಜೂಲೈ 19, 2019
22 °C

ಅಥಣಿ: ಯೋಗ ಜಾಗೃತಿಗೆ ಬೈಕ್ ಜಾಥಾ

Published:
Updated:
Prajavani

ಅಥಣಿ: ಪತಂಜಲಿ ಯೋಗ ಸಮಿತಿ, ಜಾಧವಜಿ ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ, ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಜೂನ್‌ 21ರಂದು ಬೆಳಿಗ್ಗೆ 6ಕ್ಕೆ ಇಲ್ಲಿನ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ವಿವಿಧ ಬಡಾವಣೆಗಳಲ್ಲಿ ಬೈಕ್ ಜಾಥಾದ ಮೂಲಕ ಜಾಗೃತಿ ಮೂಡಿಸಲಾಯಿತು. ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ. ಪ್ರೌಢಶಾಲೆಯಿಂದ ಆರಂಭವಾದ ಜಾಥಾ ಅನಂತಪುರ ವೃತ್ತ–ಮುರುಘೇಂದ್ರ ಬ್ಯಾಂಕ್–ಗಚ್ಚಿನಮಠ–ಮುಖ್ಯ ಪೇಟೆ– ಅಂಬೇಡ್ಕರ್‌ ವೃತ್ತ– ಎಸ್ಎಂಎಸ್ ಕಾಲೇಜು– ಕನಕ ನಗರ– ಶಂಕರ ನಗರ– ವಿಕ್ರಂಪುರ ಬಡಾವಣೆಗಳಲ್ಲಿ ಸಂಚರಿಸಿತು.

ಯೋಗ ಶಿಕ್ಷಕ ಎಸ್.ಕೆ. ಹೊಳೆಪ್ಪನವರ ಮಾತನಾಡಿ, ‘ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಾದವಜಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ ಉದ್ಘಾಟಿಸುವರು. ಪ್ರಾಣಾಯಾಮ ಆಸನಗಳನ್ನು ಹೇಳಿಕೊಡಲಾಗುವುದು’ ಎಂದು ತಿಳಿಸಿದರು.

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶ ಚಿಕ್ಕಟ್ಟಿ, ಯೋಗ ಗುರುಗಳಾದ ಎ.ಬಿ. ಪಾಟೀಲ, ಶಿವಪುತ್ರ ಯಾದವಾಡ, ಡಾ.ವಿನಾಯಕ ಚಿಂಚೋಳಿಮಠ, ಅಪ್ಪಾಸಾಬ ತಾಂಬಟ, ಶಿವಾನಂದ ಮಾಲಗಾಂವಿ, ಶ್ರೀಶೈಲ ಪಾಟೀಲ, ಸುರೇಖಾ ತಾಂಬಟ, ವಿಶಾಲಾಕ್ಷಿ ಅಂಬಿ, ರಾಜು ಗುಡ್ಡೋಡಗಿ, ಡಾ.ಆರ್‌.ಎಸ್. ದೊಡ್ಡನಿಂಗಪ್ಪಗೋಳ, ನಾಗರಾಜ ದಾಸರ, ಬಿ.ಎಸ್. ಅಂಬಿ, ಎ.ಸಿ. ಬಾಗಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !