ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಶರ್ಕತ್‌ ಕದನ ಶತಮಾನೋತ್ಸವ’ದಲ್ಲಿ ಪಾಲ್ಗೊಂಡಿದ್ದ ಬಿಪಿನ್‌ ರಾವತ್‌

Last Updated 8 ಡಿಸೆಂಬರ್ 2021, 15:34 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿ ದಳ(ಎಂಎಲ್‌ಐಆರ್‌ಸಿ)ದಲ್ಲಿ 2018ರ ಅ.30ರಂದು ರಾತ್ರಿ ನಡೆದಿದ್ದ ‘ಶರ್ಕತ್‌ ಕದನದ ಶತಮಾನೋತ್ಸವ’ ಸಮಾರಂಭದಲ್ಲಿ ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಭಾಗವಹಿಸಿದ್ದರು.

ಆಗ ಮಾತನಾಡಿದ್ದ ಅವರು, ‘ಮೊದಲ ವಿಶ್ವ ಯುದ್ಧದಲ್ಲಿ ಭಾರತೀಯ ಸೈನಿಕರು ಇಂಗ್ಲೆಂಡ್‌ ಪರವಾಗಿ ಪಾಲ್ಗೊಂಡಿದ್ದರು. ಮಿಸಿಪಿಟೋನಿ ದೇಶದ ಶರ್ಕತ್‌ ಪ್ರದೇಶದಲ್ಲಿ ಒಟ್ಟೊಮನ್‌ ಸೈನಿಕರ ವಿರುದ್ಧ 1918ರಲ್ಲಿ ಅ.23ರಿಂದ 30ರವರೆಗೆ ನಡೆದ ಯುದ್ಧದಲ್ಲಿ 117 ಮರಾಠಾ (ಎಂಎಲ್‌ಐಆರ್‌ಸಿ ಅಂದಿನ ಹೆಸರು) ಸೈನಿಕರು ಹೋರಾಡಿ, ಜಯ ಗಳಿಸಿದ್ದರು. ಐತಿಹಾಸಿಕವಾದ ಆ ಯುದ್ಧಕ್ಕೆ ನೂರು ವರ್ಷಗಳು ತುಂಬಿವೆ. ಇದರ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಮ್ಮೆ ಎನಿಸುತ್ತಿದೆ’ ಎಂದಿದ್ದರು.

‘ಮರಾಠಾ ಲಘು ಪದಾತಿ ದಳ ದೊಡ್ಡ ಇತಿಹಾಸ ಹೊಂದಿದೆ. ಈ ಪರಂಪರೆಯನ್ನು ಇಂದಿನ ಯೋಧರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಯಾವುದಾದರೂ ಕಾರ್ಯಾಚರಣೆ ಒಪ್ಪಿಸಿದರೆ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ ಎನ್ನುವ ವಿಶ್ವಾಸ ತಮಗಿದೆ’ ಎಂದು ಹೇಳಿದ್ದರು. ಮಾಧ್ಯಮ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರನ್ನು ಸಾಂಬ್ರಾ ವಿಮಾನನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಸ್ವಾಗತಿಸಲಾಗಿತ್ತು. ಆಗಿನ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಜಿ.ಪಂ. ಸಿಇಒ ಆರ್. ರಾಮಚಂದ್ರನ್, ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಬರಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT