ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್ ಹಗರಣ: ಸರ್ಕಾರ ಕ್ರಮ ವಹಿಸಲಿ– ಸತೀಶ ಜಾರಕಿಹೊಳಿ

Last Updated 11 ನವೆಂಬರ್ 2021, 12:46 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್‌ನವರಿದ್ದಾರೆ, ಬಿಜೆಪಿಯವರಿದ್ದಾರೆ ಎಂದು ಆರೋಪ-ಪ್ರತ್ಯಾರೋಪ ಮಾಡುವ ಬದಲು ಸರ್ಕಾರನೇರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ‍ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಸುಮ್ಮನೆ ಆರೋಪಿಸುತ್ತಾ ಹೋಗುವುದು ವ್ಯರ್ಥ. ಪೊಲೀಸರ ಕೈಯಲ್ಲಿ ಅಧಿಕಾರವಿದೆ. ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ಕೂಡಲೆ ಸರ್ಕಾರ ಕ್ರಮ ವಹಿಸಲಿ’ ಎಂದರು.

‘ಕಾಂಗ್ರೆಸ್ ಯುವ ನಾಯಕ ಮಹಮ್ಮದ್ ನಲಪಾಡ್ ಮತ್ತು ಉಮರ್ ನಲಪಾಡ್ ಅವರೊಂದಿಗೆ ಹ್ಯಾಕರ್ ಶ್ರೀಕಿಗೆ ಸ್ನೇಹ ಇರಬಹುದು ಅಥವಾ ಸಹಪಾಠಿಗಳೂ ಇರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಹಾಗೊಂದು ವೇಳೆ ಬಿಟ್ ಕಾಯಿನ್ ಪ್ರಕರಣದಲ್ಲಿ ನಲಪಾಡ್‌ ಪಾತ್ರವಿದ್ದರೆ ಆ ಬಗ್ಗೆ ಸರ್ಕಾರ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT