ಬುಧವಾರ, ನವೆಂಬರ್ 20, 2019
20 °C

ಬಿಜೆಪಿ ಸರ್ಕಾರ ಖಚಿತ; ಶಾಸಕ ಯಾದವಾಡ

Published:
Updated:
Prajavani

ಬೆಳಗಾವಿ: ‘ಇನ್ನೇನು ಕೆಲವೇ ದಿನಗಳಲ್ಲಿ ಈ ಸರ್ಕಾರ ಬಿದ್ದು ಹೋಗಲಿದ್ದು, ಸದ್ಯದಲ್ಲಿಯೇ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತ’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘13 ತಿಂಗಳಾದರೂ ರಾಜ್ಯದ ಸಮ್ಮಿಶ್ರ ಸರ್ಕಾರ ಟೇಕ್‌ ಆಫ್‌ ಆಗಲೇ ಇಲ್ಲ. ಈಗ ಅವರವರಲ್ಲಿ ಕಿತ್ತಾಡಿಕೊಂಡು, ಒಬ್ಬರ ನಂತರ ಒಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಅಲ್ಪಮತಕ್ಕೆ ಕುಸಿಯುವ ಕಾರಣ, ಸರ್ಕಾರ ಬಿದ್ದು ಹೋಗುವುದು ನೂರಕ್ಕೆ ನೂರರಷ್ಟು ಖಚಿತ’ ಎಂದು ನುಡಿದರು.

‘ಸರ್ಕಾರವನ್ನು ಕೆಡುವಲು ನಾವ್ಯಾರೂ ಪ್ರಯತ್ನ ಪಟ್ಟಲ್ಲಿ. ಅದಾಗಿಯೇ ಬಿದ್ದು ಹೋಗುತ್ತಿದೆ. ಸರ್ಕಾರ ಅಲ್ಪಮತಕ್ಕೆ ಕುಸಿದ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ರಾಜ್ಯಪಾಲರಿಗೆ ಕೋರಲಿದ್ದಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)