ಶುಕ್ರವಾರ, ಅಕ್ಟೋಬರ್ 29, 2021
20 °C

ಬಿಜೆಪಿ ಶಾಸಕರ ಗೈರು: ಬುಡಾ ಸಭೆ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡ) ಸಭೆಯನ್ನು, ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಗೈರು ಹಾಜರಾದ್ದರಿಂದ ಉಂಟಾದ ಕೋರಂ ಅಭಾವದಿಂದಾಗಿ ನಡೆಸಲಾಗಲಿಲ್ಲ

ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ವಿಷಯಗಳ ಚರ್ಚೆಗೆ ಉದ್ದೇಶಿಸಲಾಗಿತ್ತು. ಆದರೆ, ಶಾಸಕರು ಬಾರದಿದ್ದರಿಂದ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಸಭೆಗೆಂದು ನಿಗದಿತ ಸಮಯಕ್ಕೆ ಬಂದು ಕಾದಿದ್ದರು. ಆಗಮಿಸಿದ್ದರು. ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಕೂಡ ಬಂದಿದ್ದರು. ಸಭೆಯನ್ನು ಅ. 25ಕ್ಕೆ ಮುಂದೂಡಲಾಯಿತು. ಅಧ್ಯಕ್ಷರು ಹಾಗೂ ಶಾಸಕರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಸಭೆಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ.

‘ಪ್ರಾಧಿಕಾರದ ಸಭೆ ನಡೆದು ಒಂದು ವರ್ಷವೇ ಸಮೀಪಿಸುತ್ತಿದೆ. ಆದರೂ,  ಈ ಬಗ್ಗೆ ಸ್ಥಳೀಯ ಶಾಸಕರಾದ ಅನಿಲ ಬೆನಕೆ ಹಾಗೂ ಅಭಯ ಪಾಟೀಲ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರು ಗೈರು ಹಾಜರಾಗುತ್ತಿರುವುದರಿಂದ ಸಭೆಯನ್ನು ಪದೇ ಪದೇ ಮುಂದಕ್ಕೆ ಹಾಕಲಾಗುತ್ತಿದೆ’ ಎಂದು ಸತೀಶ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ನವೆಂಬರ್‌ನಲ್ಲಿ ಬುಡಾ ಸಭೆ ಆಗಿತ್ತು. ಇದಾದ ಬಳಿಕ ಯಾವುದೇ ಸಭೆ ನಡೆದಿಲ್ಲ. ಮುಂದಿನ ಬಾರಿಯೂ ಬಿಜೆಪಿ ಶಾಸಕರು ಆಗಮಿಸದಿದ್ದರೆ ಅಧ್ಯಕ್ಷರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ನೋಡಬೇಕು. ಕೋರಂ ಅಭಾವದಿಂದಾಗಿ ಯಾವುದೇ ರೀತಿ ಚರ್ಚೆ ಆಗಲಿಲ್ಲ. ‘ಕಣಬರಗಿ ಯೋಜನೆ–61’ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ತಿಳಿಸಿದರು.

‘ಶಾಸಕರಿಗೆ ತಿಳಿಸಿಯೇ ಸಭೆ ಕರೆದಿದ್ದೆವು. ಶಾಸಕರು, ಸದಸ್ಯರು ಬಾರದ ಹಿನ್ನೆಲೆಯಲ್ಲಿ ಎರಡು ಬಾರಿ ಸಭೆ ಮುಂದಕ್ಕೆ ಹೋಗಿದೆ. ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇರುವಾಗ ಸಭೆಗೆ ಶಾಸಕರು ಗೈರಾಗಿರುವುದು ಸರಿಯಲ್ಲ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು