ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ’ ಮಹತ್ವ ಅರಿಯದೇ ಹೋರಾಟ

ವಿರೋಧ ಪಕ್ಷದಗಳ ಮೇಲೆ ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ ಕಿಡಿ
Last Updated 19 ಜೂನ್ 2022, 4:44 IST
ಅಕ್ಷರ ಗಾತ್ರ

ಬೆಳಗಾವಿ: ‘ಅಗ್ನಿಪಥ’ವು ಭಾರತೀಯ ಸೇನಾ ಮುಖ್ಯಸ್ಥರ ಸಮಿತಿಯೇ ಅಧ್ಯಯನ ಮಾಡಿ ರೂಪಿಸಿದ ಮಹತ್ವಪೂರ್ಣ ಯೋಜನೆ. ಆದರೆ, ಇದು ಪ್ರಧಾನಿ ಮೋದಿ ಅವರ ನಡೆ ಎಂಬ ಭ್ರಮೆಯಲ್ಲಿ ವಿರೋಧ ಪಕ್ಷದವರು ದೊಂಬಿ ಎಬ್ಬಿಸಿದ್ದಾರೆ. ಯುವಜನರು ಸರಿಯಾದ ಮಾಹಿತಿ ಅರಿತು ಹೆಜ್ಜೆ ಇಡಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ ಹೇಳಿದರು.

‘ಕಾರ್ಗಿಲ್‌ ಯುದ್ಧದ ನಂತರ ಭಾರತೀಯ ವಾಯುಸೇನೆ, ಭೂಸೇನೆ, ನೌಕಾದಳಗಳ ಮುಖ್ಯಸ್ಥರು ಹಾಗೂ ನೇತಾರರ ಸಮಿತಿ ರಚಿಸಿಲಾಗಿತ್ತು. ಆ ಸಮಿತಿ ಸುದೀರ್ಘ ಚಿಂತನೆ ನಡೆಸಿ, ಚರ್ಚೆ ಮಾಡಿ, ವಿಶ್ವದ ಬೇರೆಬೇರೆ ದೇಶಗಳ ಪರಿಸ್ಥಿತಿಯನ್ನು ಗಮನಿಸಿ ‘ಅಗ್ನಿಪಥ’ ಯೋಜನೆ ರೂಪಿಸಿದೆ. ದೇಶದ ಭವಿಷ್ಯ ಭದ್ರವಾಗಲು, ಯುಜವನರು ಉದ್ಯೋಗದಲ್ಲಿ ತೊಡಗಲು ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಬೇಕಾದ ಎಲ್ಲ ಅಂಶಗಳನ್ನೂ ಇದರಲ್ಲಿ ಪರಿಗಣಿಸಲಾಗಿದೆ. ಇಂಥ ಮಹತ್ವಪೂರ್ಣ ಯೋಜನೆಯ ಕಿಂಚಿತ್ತು ಅರಿವೂ ಇಲ್ಲದೇ ಕಾಂಗ್ರೆಸ್ಸಿಗರು ಹೋರಾಟ ನಡೆಸಿದ್ದಾರೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿ ಮಾಡಿ ಲಾಭ ಮಾಡಿಕೊಳ್ಳುತ್ತಿದೆ ಎಂಬ ಭ್ರಮೆ ವಿರೋಧ ಪಕ್ಷಗಳಲ್ಲಿದೆ. ಅನವಶ್ಯಕವಾಗಿ ಯುವ ಸಮುದಾಯವನ್ನು ದಾರಿ ತಪ್ಪಿಸಲಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆ ನಮ್ಮದಾಗುತ್ತದೆ ಎಂದರೆ ಇವರಗೇನು ಕಷ್ಟ?’ ಎಂದೂ ಅವರು ಪ್ರಶ್ನಿಸಿದರು.

‘ಎಸ್ಸೆಸ್ಸೆಲ್ಸಿ ಪಾಸಾದ 17.5 ವರ್ಷದಿಂದ 23 ವರ್ಷದೊಳಗಿನವರು ಇರದಲ್ಲಿ ನೇಮಕವಾಗಲಿದ್ದಾರೆ. ಆರು ತಿಂಗಳ ತರಬೇತಿ, ನಾಲ್ಕು ವರ್ಷಗಳ ಸೇವೆ ‍ಪೂರ್ಣಗೊಳಿಸಿದ ಬಳಿಕ ₹ 12 ಲಕ್ಷ ಸೇವಾನಿಧಿ ಸಿಗುತ್ತದೆ. ಸೇವೆ ಅವಧಿಯಲ್ಲಿ ₹ 5 ಲಕ್ಷದಿಂದ ₹ 8 ಲಕ್ಷದವರೆಗೆ ಸಂಬಳ ಸಿಗಲಿದೆ. ಜತೆಗೆ, ಶೇ 25ರಷ್ಟು ಮಂದಿಗೆ ಸೇನಾ ನೇಮಕಾತಿಯೂ ಸಿಗಲಿದೆ. ಯಾರಿಗೆ ನೇಮಕಾತಿ ಆಗುವುದಿಲ್ಲವೋ ಅವರು ಪೊಲೀಸ್‌, ರಕ್ಷಣಾ ಇಲಾಖೆ, ಅರಣ್ಯ ಹೀಗೆ ಇತರ ಕ್ಷೇತ್ರಗಳಲ್ಲೂ ನೌಕರಿಗೆ ಅರ್ಹರಾಗುತ್ತಾರೆ. ಇದೆಲ್ಲಕ್ಕಿಂತ ಮೇಲಾಗಿ, ಅವರು ದೇಶಭಕ್ತರಾಗಿ ರೂಪಗೊಳ್ಳುತ್ತಾರೆ’ ಎಂದೂ ಅವರು ವಿವರಿಸಿದರು.

‘ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರ ನೆಪದಲ್ಲಿ ರೈಲುಗಳಿಗೆ ಬೆಂಕಿ ಹಚ್ಚುವುದು, ಸರ್ಕಾರಿ ಆಸ್ತಿಗೆ ಹಾನಿ ಮಾಡುವುದು, ಹಿಂಸಾಚಾರಕ್ಕೆ ಇಳಿಯುವುದು ಕಾನೂನು ಬಾಹಿರ. ಇಂಥವರನ್ನು ಪೋಷಿಸುವ ವಿರೋಧ ಪಕ್ಷಗಳಿಗೆ ಯುವಜನರೇ ಬುದ್ಧಿ ಕಲಿಸಬೇಕು.‌ ಇನ್ನು ಮೂರು ತಿಂಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಅಗ್ನಿಪಥ ಅನುಷ್ಠಾನಗೊಳ್ಳಲಿದೆ’ ಎಂದರು.

ಸಂಸದೆ ಮಂಗಲಾ ಅಂಗಡಿ ಹಾಗೂ ಪಕ್ಷದ ಮುಖಂಡರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT