ಮಂಗಳವಾರ, ಜೂನ್ 22, 2021
24 °C

ಅಂತ್ಯಸಂಸ್ಕಾರಕ್ಕೆ ಬಿಜೆಪಿ ಮುಖಂಡರ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು, ಕೋವಿಡ್‌ನಿಂದ ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿ ಅಸಹಾಯಕ ಕುಟುಂಬಕ್ಕೆ ನೆರವಾಗಿದ್ದಾರೆ.

ತಾಲ್ಲೂಕಿನ ಅಂಬೆವಾಡಿಯ 40 ವರ್ಷದ ವ್ಯಕ್ತಿ ಮೃತ. ಅವರ ಕುಟುಂಬದವರು ಧನಂಜಯ ಅವರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ಸ್ಪಂದಿಸಿದ ಅವರು ಮಿತಿಲ ಜಾಧವ, ಸಾಯಿನಾಥ ಪಾಟೀಲ, ಲೋಕೇಶ ರಜಪೂತ, ಬಾಳು ಪಾಟೀಲ, ಪ್ರವೀಣ ಸಂತಾಜಿ ಮೊದಲಾದ ಕಾರ್ಯಕರ್ತರ ಜೊತೆ ಸೇರಿ ನೆರವಾಗಿದ್ದಾರೆ. ಶವ ಸಾಗಿಸುವ ವಾಹನದ ಉಚಿತ ಸೇವೆ ಒದಗಿಸಿ, ಕೋವಿಡ್ ನಿಯಮಗಳನ್ನು ಪಾಲಿಸಿ ಹಿಂದೂ ವಿಧಿ–ವಿಧಾನಗಳ ಪ್ರಕಾರ ಅಂಬೆವಾಡಿ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಬುಧವಾರ ರಾತ್ರಿ 11ರ ಸುಮಾರಿಗೆ ಮೆಟಗುಡ್ಡ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಸವನಕುಡಚಿ ಮೂಲಕ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಧನಂಜಯ ಜಾಧವ ಅವರೊಂದಿಗೆ ಮಾರುತಿ ಬಿರಾದಾರ, ಪವನ ಜಾಧವ, ಗಜಾನನ ಬಿರಾದಾರ, ವಿನಾಯಕ ಪರೀಟ, ವಿನಯಕುಮಾರ ಹೊಲಿಜೋಳ ಮಧ್ಯರಾತ್ರಿ ಕೋವಿಡ್ ನಿಯಮಗಳ ಪ್ರಕಾರ ಹಿಂದೂ ವಿಧಿ–ವಿಧಾನಗಳಂತೆ ಸದಾಶಿವನಗರದ ಸ್ಮಶಾನದಲ್ಲಿ ನೆರವೇರಿಸಿದ್ದಾರೆ. ಶವ ಸಾಗಣೆ ವಾಹನವನ್ನು ಉಚಿತವಾಗಿ ಒದಗಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು