ತೈಲ ತೆರಿಗೆ ಹೆಚ್ಚಳ: ಬಿಜೆಪಿ ಪ್ರತಿಭಟನೆ

7

ತೈಲ ತೆರಿಗೆ ಹೆಚ್ಚಳ: ಬಿಜೆಪಿ ಪ್ರತಿಭಟನೆ

Published:
Updated:
Prajavani

ಬೆಳಗಾವಿ: ಪೆಟ್ರೋಲ್ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಗ್ರಾಮೀಣ ಮಂಡಲದ ಕಾರ್ಯಕರ್ತರು ಭಾನುವಾರ ಹಿಂಡಲಗಾ ಗಣಪತಿ ದೇವಸ್ಥಾನದ ಬಳಿ ರಸ್ತೆತಡೆ ನಡೆಸಿದರು.

ನೇತೃತ್ವ ವಹಿಸಿದ್ದ ಮುಖಂಡ ಸಂಜಯ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರವು ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಇಳಿಸಿದೆ. ಆದರೆ, ರಾಜ್ಯದಲ್ಲಿರುವ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅವುಗಳ ಮೇಲಿನ ತೆರಿಗೆ ದರವನ್ನು ಹೆಚ್ಚಿಸಿ ಜನರಿಗೆ ಬರೆ ಎಳೆದಿದೆ. ಹೆಚ್ಚಿಸಿರುವ ತೆರಿಗೆಯನ್ನು ಕೂಡಲೇ ಇಳಿಸಬೇಕು’ ಎಂದು ಒತ್ತಾಯಿಸಿದರು.

‘ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದರಿಂದ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಚೇತನ ಪಾಟೀಲ, ಮುಖಂಡರಾದ ರಾಮಚಂದ್ರ ಮನ್ನೋಳಕರ, ಅರುಣ ಕೋಲಕಾರ, ಯಲ್ಲಪ್ಪ ಪಾಟೀಲ, ಹನುಮಂತ ಪಾಟೀಲ, ಕಾಚು ಸುಕಯೇ, ಸಾಗರ ಶೇರೆಕರ, ಸನತಕುಮಾರ ವಿ.ವಿ., ಅಭಯ ಅವಲಕ್ಕಿ, ಬಾಪು ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !