ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಪ್ರೇರಣೆಯಿಂದ ರಕ್ತ ದಾನಕ್ಕೆ ಸಲಹೆ

Last Updated 26 ಜೂನ್ 2019, 15:46 IST
ಅಕ್ಷರ ಗಾತ್ರ

ಬೆನಕಟ್ಟಿ: ‘ಆರೋಗ್ಯವಂತರಾದ ಎಲ್ಲರೂ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬೇಕು. ಇದರಿಂದ ಯಾವುದೇ ರೋಗಕ್ಕೆ ತುತ್ತಾಗುವುದಿಲ್ಲ’ ಎಂದು ತಾಲ್ಲೂಕು ಮುಖ್ಯ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ತಿಳಿಸಿದರು.

ಸಮೀಪದ ಮಬನೂರ ಗ್ರಾಮದ ದೇವಸ್ಥಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಬನೂರ-ಮದ್ಲೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯ್ತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ರಕ್ತದಾನದಿಂದ ಹೃದಯಾಘಾತದ ಸಾಧ್ಯತೆಗಳು ಕಡಿಮೆಯಾಗುತ್ತವೆ. ರಕ್ತದಲ್ಲಿರುವ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಫಕೀರಪ್ಪ ಹದ್ದನ್ನವರ ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರೋಜಿನಿ ಮ. ಮಾದರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಸದಸ್ಯ ರುದ್ರಪ್ಪ ರೇವನ್ನವರ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪುಂಡಲೀಕ ಮೇಟಿ, ವೈ.ಬಿ. ನರಿ, ಸುಭಾಷಗೌಡ ಪಾಟೀಲ, ರಕ್ತ ಭಂಡಾರದ ಅಧಿಕಾರಿ ಡಾ.ಪ್ರಭಾಕರ ಪಾಟೀಲ, ಡಾ.ಆರತಿ ಚಿನಕೋಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್. ಗಂಜಿ, ಡಾ.ಎಂ.ಟಿ. ಕುಂಬಾರ, ಎಂ.ಎಚ್. ಹುಣಶಿಕಟ್ಟಿ, ಎನ್‌ಸಿಡಿ ಯರಗಟ್ಟಿ ಘಟಕ ಸಿಬ್ಬಂದಿ ಲಕ್ಷ್ಮಿ ನಾಯ್ಕರ, ಸಮೀರ ಗೋರೆಖಾನ, ಸಂಗೀತಾ ದರೂರ, ಬಸಪ್ಪ ಹಡಪದ, ನಾಗಪ್ಪ ಬೆಳ್ಳಿವರಿ, ಉದಯ ನರಿ, ಭೀಮಪ್ಪ ಮುರಗೋಡ, ಎಂ.ಪಟಾತ, ರಾಮಚಂದ್ರ ಪಟಾತ ಇದ್ದರು.

ಪಿಡಿಒ ಸುರೇಶ ನಾಗೋಜಿ ಸ್ವಾಗತಿಸಿದರು. ಎಚ್.ಎಸ್. ಪಚ್ಚಿನ್ನವರ ನಿರೂಪಿಸಿದರು. ಬಸವರಾಜ ಕುರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT