ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ತದಾನ ಶಿಬಿರ 15ರಂದು

Published : 6 ಆಗಸ್ಟ್ 2024, 5:14 IST
Last Updated : 6 ಆಗಸ್ಟ್ 2024, 5:14 IST
ಫಾಲೋ ಮಾಡಿ
Comments

ಬೆಳಗಾವಿ: 'ಇಲ್ಲಿನ ಹಿಂದವಾಡಿಯ ಮಹಾವೀರ ಭವನದಲ್ಲಿ ಜೈನ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್(ಜಿತೋ) ಬೆಳಗಾವಿ ಘಟಕದ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆ.15ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ

ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ' ಎಂದು ಸಂಯೋಜಕ ಕುಂತಿನಾಥ ಕಲಮನಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಂಕಷ್ಟ ಸಮಯದಲ್ಲಿ‌ ಜನರಿಗೆ ನೆರವಾಗುವ ದೃಷ್ಟಿಯಿಂದ ನಾಲ್ಕು ವರ್ಷಗಳಿಂದ ಈ ಶಿಬಿರ ಆಯೋಜಿಸುತ್ತಿದ್ದೇವೆ. ಕಳೆದ ವರ್ಷ 936 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಈ ಬಾರಿ 1,200 ಯೂನಿಟ್ ರಕ್ತ ಸಂಗ್ರಹವಾಗುವ ನಿರೀಕ್ಷೆ ಇದೆ' ಎಂದರು.

'ಕೆಎಲ್ಇ ರಕ್ತನಿಧಿ‌‌ ಕೇಂದ್ರ, ಬಿಮ್ಸ್ ರಕ್ತನಿಧಿ ಕೇಂದ್ರ, ಮಹಾವೀರ ರಕ್ತನಿಧಿ ಕೇಂದ್ರ, ಬೆಲಗಮ್ ರಕ್ತನಿಧಿ ಕೇಂದ್ರದಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಲಿವೆ. 45 ಸಂಘ-ಸಂಸ್ಥೆಗಳು ಕೈಜೋಡಿಸಿವೆ' ಎಂದು ಹೇಳಿದರು.

'ಇಲ್ಲಿ ರಕ್ತದಾನ ಮಾಡುವವರಿಗೆ ದಿ‌ ನ್ಯೂ ಇಂಡಿಯಾ ಅಶುರೆನ್ಸ್ ಕೋ-ಲಿಮಿಟೆಡ್ ಕಂಪನಿಯವರು ಒಂದು ವರ್ಷದ ಅವಧಿಗೆ ₹1 ಲಕ್ಷ ಅಪಘಾತ ವಿಮೆ ಸೌಕರ್ಯ ಕಲ್ಪಿಸಲಿದ್ದಾರೆ. ಮಾಹಿತಿಗೆ ಮೊ.ಸಂ.9035187431 ಸಂಪರ್ಕಿಸಬಹುದು' ಎಂದು ವಿವರಿಸಿದರು.

ಜಿತೋ ಅಧ್ಯಕ್ಷ ವೀರಧವಳ ಉಪಾಧ್ಯೆ, ಪ್ರಧಾನ ಕಾರ್ಯದರ್ಶಿ ಅಶೋಕ ಕಟಾರಿಯಾ ಇತರರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT