ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಸಂವಹನಕ್ಕೆ ಗೊಂಬೆಯಾಟ ಸಹಕಾರಿ

ಉಪನ್ಯಾಸಕ ರವಿ ಭಜಂತ್ರಿ ಅಭಿಮತ
Last Updated 20 ಸೆಪ್ಟೆಂಬರ್ 2019, 5:16 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಜ್ಞಾನ ಮೊದಲಾದ ಕ್ಲಿಷ್ಟಕರ ವಿಷಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥ ಮಾಡಿಸಲು ಗೊಂಬೆಯಾಟ ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ಸರ್ಕಾರಿ ಶಿಕ್ಷಣ ಕಾಲೇಜಿನ ಉಪನ್ಯಾಸಕ ರವಿ ಭಜಂತ್ರಿ ಅಭಿಪ್ರಾಯಪಟ್ಟರು.

‘ಸೇವಕ’ ಸಂಸ್ಥೆಯು ಇಲ್ಲಿನ ಮಹಾಂತೇಶನಗರ ರಹವಾಸಿಗಳ ಸಂಘ ಶಿಕ್ಷಣ ಕಾಲೇಜು, ವಿಜ್ಞಾನ ಮತ್ತು ತಂತ್ರಜ್ಙಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಸಹಯೋಗದಲ್ಲಿ ವಿಜ್ಞಾನ ಪದವೀಧರರು, ಶಿಕ್ಷಕರು ಹಾಗೂ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ‘ಸಾಂಪ್ರದಾಯಿಕ ಗೊಂಬೆಯಾಟದ ಮೂಲಕ ವಿಜ್ಞಾನ ಸಂವಹನ ತರಬೇತಿ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಜ್ಞಾನವನ್ನು ಜನರಿಗೆ ಸುಲಭವಾಗಿ ಮುಟ್ಟಿಸುವಲ್ಲಿ ಹಾಗೂ ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆಗಳು, ತಪ್ಪುಕಲ್ಪನೆಗಳ ನಿವಾರಣೆಗೆ ಬೊಂಬೆಯಾಟ ಸಹಕಾರಿಯಾಗಿದೆ. ವೈಜ್ಞಾನಿಕ ಅರಿವು ಹಾಗೂ ಮನೋಭಾವ ಮೂಡಿಸಲು ಬಳಸಿಕೊಳ್ಳಬಹುದಾಗಿದೆ’ ಎಂದರು.

‘ರಾಮಾಯಾಣ ಹಾಗೂ ಮಹಾಭಾರತದಂತಹ ಜನಸಮಾನ್ಯರ ಜ್ಞಾನಕ್ಕೆ ನಿಲುಕದ ಮಹಾಗ್ರಂಥಗಳನ್ನು ಸುಲಭವಾಗಿ ಅರ್ಥವಾಗುವಂತೆ ಮಾಡುವಲ್ಲಿ ಗೊಂಬೆಯಾಟದಂತಹ ಆಕರ್ಷಕ ಜನಪದ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದ್ದವು. ಈಗ ಇದನ್ನು ವೈಜ್ಞಾನಿಕ ಮನೋಭಾವ ಮೂಡಿಸುವುದಕ್ಕೂ ಬಳಸುತ್ತಿರುವುದು ಸೃಜನಾತ್ಮಕ ಪರಿಕಲ್ಪನೆಯಾಗಿದೆ’ ಎಂದು ಹೇಳಿದರು.

‘ವಿಜ್ಞಾನ ಸತ್ಯ. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆದಾಗ ಮಾತ್ರವೇ ಮೌಢ್ಯಗಳು ದೂರಾಗಲು ಸಾಧ್ಯವಿದೆ’ ಎಂದರು.

‌ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ನಾವಿ, ಮಹಿಳಾ ಕಲ್ಯಾಣ ಸಂಸ್ಥೆಯ ನಿರ್ದೇಶಕ ಎಂ.ಎಸ್. ಚೌಗಲಾ, ಅಧ್ಯಕ್ಷತೆ ವಹಿಸಿದ್ದ ಮಹಾಂತೇಶನಗರ ರಹವಾಸಿಗಳ ಸಂಘ ಶಿಕ್ಷಣ ಕಾಲೇಜಿನ ಪ್ರಾಚಾರ್ಯರಾದ ಡಾ.ನಿರ್ಮಲಾ ಬಟ್ಟಲ, ಕಾರ್ಯಾಗಾರದ ಪ್ರಧಾನ ಪರಿವೀಕ್ಷಕ ಆನಂದ ಲೋಬೊ ಮಾತನಾಡಿದರು.

ಲೇಖಕ ಸಿದ್ದಪ್ಪ ಬಿರಾದಾರ, ರಂಗ ನಿರ್ದೇಶಕರಾದ ಗಣೇಶ ಹೆಗ್ಗೋಡು, ಸುನಂದಾ ನಿಂಬನಗೌಡರ ಇದ್ದರು.

ಶಿಕ್ಷಕಿ ಸೋನಲ್ ಚೀನಿವಾಲ ನಿರೂಪಿಸಿದರು. ಉಪನ್ಯಾಸಕ ಎಸ್.ಬಿ. ವಾಲಿಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT