ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ಚೇತರಿಕೆ ವರ್ಷ: ಇಲಾಖೆ ನಿರ್ಧಾರ: ಎನ್.ಎನ್. ಕಬ್ಬೂರ

Last Updated 17 ಮೇ 2022, 3:59 IST
ಅಕ್ಷರ ಗಾತ್ರ

ಸವದತ್ತಿ: ಕೋವಿಡ್‍ನಿಂದಾಗಿ 2 ವರ್ಷದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಕಲಿಕಾ ಚಟುವಟಿಕೆಗಳ ಅಂತರ ಸರಿಹೊಂದಿಸಲು ಪ್ರಸಕ್ತ ವರ್ಷ ಕಲಿಕಾ ಚೇತರಿಕೆ ವರ್ಷವಾಗಿ ಇಲಾಖೆ ಘೋಷಣೆ ಮಾಡಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ಶಿಕ್ಷಕ ಎನ್.ಎನ್. ಕಬ್ಬೂರ ಹೇಳಿದರು.

ಇಲ್ಲಿನ ಸರ್ಕಾರಿ ಶಾಲೆ ನಂ-6 ರಲ್ಲಿ ಸೋಮವಾರ ಜರುಗಿದ ಶಾಲಾ ಪ್ರಾರಂಭೋತ್ಸವದಲ್ಲಿ ಮಾತನಾಡಿ, ವಿದ್ಯಾರ್ಥಿಳು, ಶಿಕ್ಷಕ ವೃಂದ, ಪಾಲಕರು ಸಹಕರಿಸಿ ಕಲಿಕಾ ಚೇತರಿಕೆ ವರ್ಷ ಯಶಸ್ವಿ ಗೊಳಿಸಲಬೇಕಿದೆ ಎಂದರು. ಮಕ್ಕಳಿಗೆ ಬಲೂನ್ ನೀಡಿ ನೂತನ ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಕೋರಲಾಯಿತು. ಶಿಕ್ಷಕಿ ಎಂ.ಆರ್. ಫಂಡಿ ಮಕ್ಕಳಿಗೆ ಪುಸ್ತಕ ವಿತರಿಸಿದರು. ನಂತರ ಸಿಹಿ ಹಂಚಲಾಯಿತು. ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿ, ಪಾಲಕ-ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT