ಗುರುವಾರ , ಜನವರಿ 23, 2020
27 °C

ಬೆಳಗಾವಿ: ಬಸ್‌ ಹರಿದು ಇಬ್ಬರು ಭಕ್ತರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಸವದತ್ತಿ ಬಳಿಯ ಯಲ್ಲಮ್ಮನ ಗುಡ್ಡ– ಜೋಗುಳಬಾವಿ ಮಾರ್ಗದಲ್ಲಿ ಶುಕ್ರವಾರ ಸಂಜೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಡಿಪೊಗೆ ಸೇರಿದ ಬಸ್‌ ಹರಿದ ಪರಿಣಾಮ ಮಹಿಳೆಯೂ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ.

ಬೆಳಗಾವಿ ನಗರದ ಶಹಾಪುರದ ನಿಕಿತಾ ರಮೇಶ ಹದಗಲ್‌ (25) ಹಾಗೂ ಬಸಪ್ಪ ವೆಂಕಪ್ಪ ಹಳೇಮನಿ (34) ಅವರು ಮೃತರಾಗಿದ್ದಾರೆ.  ಯಲ್ಲಮ್ಮನ ಜಾತ್ರೆ ಮುಗಿಸಿಕೊಡು ರಸ್ತೆಯ ಬದಿಯಿಂದ ಇವರು ನಡೆದುಕೊಂಡು ಹೋಗುತ್ತಿದ್ದಾಗ, ಹಿಂಬದಿಯಿಂದ ಬಸ್‌ ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಬಸ್‌ ಯಲ್ಲಮ್ಮನಗುಡ್ಡದಿಂದ ಧಾರವಾಡಕ್ಕೆ ಹೊರಟಿತ್ತು. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು