ಮೂಡಲಗಿ: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಬಳಿ ಹಾಳುಬಿದ್ದ ತಂಗುದಾಣಕ್ಕೆ ಶುಕ್ರವಾರ ಸುಣ್ಣ ಬಣ್ಣ ಬಳೆದು ಪುನೀತ್ ರಾಜಕುಮಾರ್ ತಂಗುದಾಣವಾಗಿ ರೂಪಾಂತರಗೊಂಡು ಎಲ್ಲರ ಕಣ್ಮನ ಸೆಳೆಯಿತು.
ಇಲ್ಲಿಯ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಹಾಗೂ ಗೆಳೆಯರು ಸೇರಿ ಪಾಳು ಬಿದ್ದ ತಂಗುದಾಣಕ್ಕೆ ಹೊಸ ರೂಪಕೊಟ್ಟಿದ್ದಾರೆ. ಪುನೀತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ಶುಕ್ರವಾರ ನೂರಾರು ಅಭಿಮಾನಗಳೊಂದಿಗೆ ತಂಗುದಾಣದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ತಂಗುದಾಣವ್ನು ಕನ್ನಡ ಧ್ವಜಗಳು, ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ಶಾಲಾ ಮಕ್ಕಳು ನಾಡಿಗೀತೆ ಹೇಳಿದರು.
‘ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿರುವ ತಂಗುದಾಣವು ನಿರುಪಯುಕ್ತವಾಗಿತ್ತು. ಜನರಿಗೆ ಅನುಕೂಲ ಆಗಲೆಂದು ನವೀಕರಣ ಮಾಡಿದ್ದೇವಿ’ ಎಂದು ಈರಪ್ಪ ಢವಳೇಶ್ವರ ಹೇಳಿದರು.
ಯುವ ಕಲಾವಿದ ಓಂ ಸಂತಾ ಅವರು ಪುನಿತ್ ರಾಜಕುಮಾರ್ ಅವರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾದಿಕಾರಿ ಅಜಿತ್ ಮನ್ನಿಕೇರಿ, ಪುಸರಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಗಾಯಕ ಮಂಜುನಾಥ ಹುಡೆದ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಶಿವು ಚಂಡಕಿ, ಶಿವು ಸಣ್ಣಕ್ಕಿ, ಈರಣ್ಣ ಕೊಣ್ಣೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.