ಬುಧವಾರ, ಆಗಸ್ಟ್ 21, 2019
22 °C

ಬೈಕ್‌ನಲ್ಲಿ ಬಂದು ಸರ ಕಳವು: ನಾಲ್ವರ ಬಂಧನ

Published:
Updated:

ಬೆಳಗಾವಿ: ಬೈಕ್‌ನಲ್ಲಿ ಬಂದು ಚಿನ್ನದ ಸರ ಕಳವು ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಖಡೇಬಜಾರ್‌ ಉಪವಿಭಾಗದ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದು, ಅವರಿಂದ 3 ಬೈಕ್‌ ಸಮೇತ ₹ 8.98 ಲಕ್ಷ ಮೌಲ್ಯದ 184 ಗ್ರಾಂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಉದ್ಯಮಬಾಗ್ ಲಕ್ಷ್ಮಿನಗರದ ನಿವಾಸಿಗಳಾದ ದೀಪಕ ಅಗಸಿಮನಿ (21), ದೇವರಾಜ ಪೂಜಾರಿ (21), ನಾಗರಾಜ ತಳವಾರ (20) ಹಾಗೂ ಅಸ್ಲಂ ಶೇರೆಗಾರ (20) ಬಂಧಿತರು. ‘ಇವರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಖಡೇಬಜಾರ್‌-1, ಟಿಳಕವಾಡಿ-1, ಉದ್ಯಮಬಾಗ್-4, ಮಾಳಮಾರುತಿ-2 ಮತ್ತು ಅಂಕಲಗಿಯಲ್ಲಿ ಕಳವು ಮಾಡಿದ್ದಾಗಿ ಒಪ್ಪಿದ್ದಾರೆ’ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ಗಳಾದ ಡಿ.ಬಿ. ಶಿಂಧೆ (ಖಡೇಬಜಾರ್‌) ಹಾಗೂ ಎಸ್‌.ಸಿ. ಪಾಟೀಲ (ಉದ್ಯಮಬಾಗ್) ನೇತೃತ್ವದಲ್ಲಿ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಅವರನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

 

Post Comments (+)