ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕಾಕದಲ್ಲಿ ಚಂದುಕಾಕಾ ಸರಾಫ್ ಜ್ಯುವೆಲ್ಸ್‌ನ ನೂತನ ಮಳಿಗೆ ಉದ್ಘಾಟನೆ 22ರಂದು

Published 18 ಆಗಸ್ಟ್ 2024, 14:11 IST
Last Updated 18 ಆಗಸ್ಟ್ 2024, 14:11 IST
ಅಕ್ಷರ ಗಾತ್ರ

ಗೋಕಾಕ: ಇಲ್ಲಿನ ಹೊಸಪೇಟೆ ಗಲ್ಲಿಯ ಬಸ್‌ ನಿಲ್ದಾಣ ರಸ್ತೆಯಲ್ಲಿ(ಅರಣ್ಯ ಕಚೇರಿ ಎದುರು) ‘ಚಂದುಕಾಕಾ ಸರಾಫ್ ಜ್ಯುವೆಲ್ಸ್’ನ  ನೂತನ ಮಳಿಗೆ ಉದ್ಘಾಟನೆ ಸಮಾರಂಭ ಆ.22ರಂದು ಬೆಳಿಗ್ಗೆ 11.25ಕ್ಕೆ ನಡೆಯಲಿದೆ.

ಗೋಕಾಕದ ಮುರುಘರಾಜೇಂದ್ರ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ನಿಜಗುಣ ದೇವರು, ಅಂಕಲಗಿಯ ಅಮರಸಿದ್ಧೇಶ್ವರ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 

ಮುಖ್ಯ ಅತಿಥಿಗಳಾಗಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಜಗದೀಶ ಶೆಟ್ಟರ್‌, ಪ್ರಿಯಾಂಕಾ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ, ಲಕ್ಷ್ಮಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಭೀಮಶಿ ಜಾರಕಿಹೊಳಿ, ಮುಖಂಡರಾದ ಅಂಬಿರಾವ್ ಪಾಟೀಲ, ಅಮರನಾಥ ಜಾರಕಿಹೊಳಿ, ಚಂದುಕಾಕಾ ಸರಾಫ್‌ನ ಸಂಚಾಲಕ ಅತುಲ್‌ ಜಿನದತ್ತ ಶಹಾ, ಸಂಗೀತಾ ಶಹಾ, ಸಿದ್ದಾರ್ಥ ಶಹಾ, ಆದಿತ್ಯ ಶಹಾ ಆಗಮಿಸುವರು.

‘ವಿಶಿಷ್ಟ ವಿನ್ಯಾಸದ ಮತ್ತು ಸಾಂಪ್ರದಾಯಿಕವಾದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣ ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿರುವ ‘ಚಂದುಕಾಕಾ ಸರಾಫ್ ಜ್ಯುವೆಲ್ಸ್’ ತನ್ನ 13ನೇ ಶಾಖೆಯನ್ನು ಗೋಕಾಕದಲ್ಲಿ ತೆರೆಯುತ್ತಿದೆ. ಇದರಿಂದ ಗೋಕಾಕ, ಘಟಪ್ರಭಾ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಹಕರಿಗೆ ಅನುಕೂಲವಾಗಲಿದೆ’ ಎಂದು ಚಂದುಕಾಕಾ ಸರಾಫ್ ಜ್ಯುವೆಲ್ಸ್‌ನ ಸಂಚಾಲಕ ಅತುಲ್ ಶಹಾ ಹೇಳಿದ್ದಾರೆ. 

‘ಶಾಖೆ ಉದ್ಘಾಟನೆ ಹಿನ್ನೆಲೆಯಲ್ಲಿ ಆ.22ರಿಂದ 25ರ ಅವಧಿಯಲ್ಲಿ ₹15 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಆಭರಣ ಖರೀದಿಸುವವರಿಗೆ ಲಕ್ಕಿ ಡ್ರಾ ಮೂಲಕ ಐದು ಲ್ಯಾಪ್‌ಟಾಪ್‌, ಮೂರು ಸ್ಕೂಟರ್ ಮತ್ತು ಎಂಟು ಮೊಬೈಲ್‌ಗಳನ್ನು ಬಹುಮಾನದ ರೂಪದಲ್ಲಿ ನೀಡಲಿದ್ದೇವೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT