ಚನ್ನಮ್ಮನ ಕಿತ್ತೂರು: ಇಲ್ಲಿಯ ಸೋಮವಾರ ಪೇಟೆಯ ಕಸಾಯಿ ಗಲ್ಲಿಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕೂಡಿ ಹಾಕಲಾಗಿದೆ ಹಾಗೂ ಎರಡು ಹಸುಗಳನ್ನು ಹತ್ಯೆ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಕಿತ್ತೂರು ಪೊಲೀಸರು ಕರ್ನಾಟಕ ಗೋ ಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ ಅಡಿ 6 ಜನರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಾರುಖ್ ಇಸ್ಮಾಯಿಲ್ ಬೇಪಾರಿ, ದಾದಾಫೀರ್ ಮಹಮ್ಮದಶರೀಫ್ ಬೇಪಾರಿ, ಮುಜಮಿಲ್ ನೂರಅಹ್ಮದ್ ಬೇಪಾರಿ, ಅಮಾನ್ ಮಹಮ್ಮದಲಿ ಬೇಪಾರಿ, ಮಹಮ್ಮದಯೂಸುಫ್ ಮಹಮ್ಮದಉಸ್ಮಾನ್ ಬೇಪಾರಿ ಹಾಗೂ ಖಲೀಲಅಹ್ಮದ್ ಜಮೀಲಅಹ್ಮದ್ ಪಠಾಣ ಆರೋಪಿಗಳು.

ಬಕ್ರೀದ್ ಹಿನ್ನೆಲೆಯಲ್ಲಿ ಹಸು, ಎತ್ತು, ಕರುಗಳನ್ನು ಅಕ್ರಮವಾಗಿ ಕೂಡಿ ಹಾಕಲಾಗಿತ್ತು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ತೆರಳಿದಾಗ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಪಟ್ಟಣದಲ್ಲಿ ನಿಯೋಜಿಸಲಾಗಿತ್ತು.

ರಕ್ಷಣೆ ಮಾಡಿರುವ ಎಲ್ಲ ಜಾನುವಾರುಗಳನ್ನು ಧಾರವಾಡ ತಾಲ್ಲೂಕಿನ ಮದನಬಾವಿ ಬಳಿಯಿರುವ ಸರ್ಕಾರಿ ಗೋಶಾಲೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಜರಂಗದಳ ರಾಜ್ಯ ಸಂಘಟನೆಯ ಸಹಸಂಚಾಲಕ ಶಿವಾನಂದ ಸತ್ತಿಗೇರಿ ಮಾತನಾಡಿ, ಅಕ್ರಮವಾಗಿ ಗೋಹತ್ಯೆ ಮಾಡುತ್ತಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ವಧೆ ಮಾಡುವ ಮನೆಯನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಹಿರೇಬಾಗೇವಾಡಿ: ಸಾರಾಯಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿದ್ದ ಗ್ರಾಮದ ಬಸವನಗರ ನಿವಾಸಿ ಬಸವರಾಜ ಚಂದ್ರಶೇಖರ ದೂಳಪ್ಪನವರ (50) ಎಂಬುವವನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಸಾಪುರ ರಸ್ತೆಯಲ್ಲಿ ಮಾರಾಟದ ಉದ್ದೇಶದಿಂದ ಸಂಗ್ರಹಿಸಿದ್ದಾಗ ಹಿರೇಬಾಗೇವಾಡಿ ಪೊಲೀಸರು ದಾಳಿ ನಡೆಸಿ ಆರೋಪಿಯಿಂದ ₹3,680 ಮೌಲ್ಯದ ಸಾರಾಯಿ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-21-79089426

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.