ಚನ್ನಮ್ಮನ ಕಿತ್ತೂರು: ಇಲ್ಲಿಯ ಬಸ್ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದ ಹುಬ್ಬಳ್ಳಿಯ ಗಂಗಾಧರ ನಗರದ ನಿವಾಸಿ ಅವಿನಾಶ ನಾಗೇಶ ಬೆಸ್ತರ (31) ಎಂಬಾತನನ್ನು ಇಲ್ಲಿಯ ಪೊಲೀಸರು ಬಂಧಿಸಿ, ಆತನಿಂದ ₹1ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ವೃತ್ತಿಯಿಂದ ಆಟೊ ಚಾಲಕನಾಗಿರುವ ಅವಿನಾಶ ಹುಲಿಕಟ್ಟಿ ಮಹಿಳೆಯ ದುಡ್ಡು ದೋಚಿದ ಮತ್ತೊಂದು ಪ್ರಕರಣವೂ ಪತ್ತೆಯಾಗಿದೆ ಎಂದು ಡಿವೈಎಸ್ಪಿ ವೀರಯ್ಯ ಹಿರೇಮಠ ಅವರು ಭಾನುವಾರ ತಿಳಿಸಿದರು.

ಕುಲವಳ್ಳಿ ನಿಂಗಾಪುರ ಗ್ರಾಮದ ವಿದ್ಯಾಶ್ರೀ ಶಿವಾನಂದ ಸಂಗೊಳ್ಳಿ ಅವರು ಕಿತ್ತೂರಿನ ಕೆವಿಜಿ ಬ್ಯಾಂಕ್ ಶಾಖೆಯ ತಮ್ಮ ಖಾತೆಯಲ್ಲಿನ ಹಣ ಪಡೆದು ಮರಳಿ ಊರಿಗೆ ತೆರಳಲು ಕಿತ್ತೂರು – ಅಳ್ನಾವರ ಬಸ್ ಹತ್ತಿದ್ದರು. ಬಸ್ ನಿಲ್ದಾಣದಿಂದ ಚನ್ನಾಪುರ ಗ್ರಾಮದ ಕ್ರಾಸ್ಗೆ ಹೋಗುವಷ್ಟರಲ್ಲಿಯೇ ಅವರ ವ್ಯಾನಿಟಿ ಬ್ಯಾಗ್ ಕತ್ತರಿಸಿ ಅದರಲ್ಲಿಯ ₹99,000 ನಗದು ದೋಚಿದ್ದ ಎಂದರು.

ಮತ್ತೊಂದು ಪ್ರಕರಣದಲ್ಲಿ ಹುಲಿಕಟ್ಟಿಯ ಗಿರಿಜೆವ್ವ ದುಂಡಪ್ಪ ಶಹಾಪುರ ಅವರು ಸಾಲದ ಹಣವನ್ನು ತುಂಬಲು ಎಂ. ಕೆ. ಹುಬ್ಬಳ್ಳಿಯ ಬ್ಯಾಂಕ್ ಆಫ್ ಇಂಡಿಯಾಗೆ ಬಸ್ನಲ್ಲಿ ಹೊರಟಾಗ ₹63,000 ಇದ್ದ ಕೈಚೀಲವನ್ನು ದೋಚಿಕೊಂಡು ಪರಾರಿಯಾಗಿದ್ದ ಎಂದು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಡಿವೈಎಸ್ಪಿ ವೀರಯ್ಯ ಹಿರೇಮಠ ಹಾಗೂ ಸಿಪಿಐ ಶಿವಾನಂದ ಗುಡಗನಟ್ಟಿ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರವೀಣ ಗಂಗೋಳ, ಅಪರಾಧ ವಿಭಾಗದ ಎಸ್ಐ ಜಿ.ಜಿ.ಹಂಪಣ್ಣವರ ಹಾಗೂ ಸಿಬ್ಬಂದಿಯಾದ ಎಸ್.ಎ. ದಫೇದಾರ, ನಾಗರಾಜ ಕಡಗನ್ನವರ, ಎ.ಎಂ.ಚಿಕ್ಕೇರಿ, ಶಾಂತಿನಾಥ ಪಾಟೀಲ, ಮಂಜುನಾಥ ಹಳ್ಳಿ, ಜಿ.ಎಸ್.ಸಾಲಿಮಠ ಹಾಗೂ ಎಂ.ಬಿ. ಕಂಬಾರ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಯಶಸ್ವಿ ಕಾರ್ಯಕ್ಕೆ ಎಸ್.ಪಿ ಕೆ.ರಾಮರಾಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸವದತ್ತಿ: ನಗರದ ಹೊರವಲಯದಲ್ಲಿರುವ ಧಾರವಾಡ-ಹುಬ್ಬಳ್ಳಿ ನೀರು ಸರಬರಾಜು ಜಾಕ್ವೆಲ್ ಬಳಿ ಈಜಲು ತೆರಳಿದ ಯುವಕ ಮುಸ್ತಾಕಿಮ್ ಇಮಾಮಸಾಬ ಮುಜಾವರ (18) ಈಜು ಬಾರದೇ ನೀರಲ್ಲಿ ಮುಳಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಇಬ್ಬರು ಸ್ನೇಹಿತರೊಟ್ಟಿಗೆ ಈಜಲು ತೆರಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ಶನಿವಾರದಿಂದಲೇ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಭಾನುವಾರ ಮೃತ ದೇಹ ಹೊರ ತೆಗೆದಿದ್ದಾರೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಕೆಟ್ ಬೆಟ್ಟಿಂಗ್: ವ್ಯಕ್ತಿ ಬಂಧನ

ಬೆಳಗಾವಿ: ಇಲ್ಲಿನ ಜೈಲ್ ಗ್ರೌಂಡ್ನ ಮರಾಠಿ ಶಾಲೆ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಶನಿವಾರ ಆನ್ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಒಬ್ಬನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಜಾದ್ ನಗರದ ಸುಫಿಯಾನ್ ಶೇಖ್ ಬಂಧಿತ. ಆತನಿಂದ ಮೊಬೈಲ್, ₹5,600 ನಗದು ವಶಕ್ಕೆ ಪಡೆಯಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-21-148755602

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.