ಚನ್ನಮ್ಮನ ಕಿತ್ತೂರು: ‘ಸಣ್ಣ ಹೋಟೆಲ್ ನಡೆಸುವವರಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ಲೋಪ ಸರಿಪಡಿಸಬೇಕು’ ಎಂದು ಆಗ್ರಹಿಸಿ ಹೋಟೆಲ್ ಮಾಲೀಕರ ಸಂಘಟನೆ ಸದಸ್ಯರು ಗ್ರೇಡ್ 2 ತಹಶೀಲ್ದಾರ್ ಪಿ. ವೈ. ಕೋರಿ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಕಿರಣ ವಾಳದ ಮಾತನಾಡಿ, ‘ಬಡವರು ಚಿಕ್ಕ, ಚಿಕ್ಕ ಹೋಟೆಲ್ ಇಟ್ಟುಕೊಂಡು ಉಪಜೀವನ ನಡೆಸಿಕೊಂಡು ಹೊರಟಿದ್ದಾರೆ. ಅವರಿಗೆಲ್ಲ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಸಿಲಿಂಡರ್ ಪೂರೈಕೆಯ ಏಜೆನ್ಸಿ ಅವರನ್ನು ಕರೆದು ಸಮರ್ಪಕ ಪೂರೈಕೆ ಮಾಡುವಂತೆ ತಾಕೀತು ಮಾಡುತ್ತೇವೆ ಎಂದು ಗ್ರೇಡ್ 2 ತಹಶೀಲ್ದಾರ್ ಕೋರಿ ತಿಳಿಸಿದರು.ಗಣೇಶಪ್ರಸಾದ್, ಪೈ, ದುರ್ಗಾಂಬಾ, ಮಂದಾರ್ತಿ, ಮಹಾಲಕ್ಷ್ಮಿ, ದರ್ಶಿನಿ, ಗಜರಾಜ ಕ್ಯಾಂಟೀನ್, ಸಾಯಿ ಫಾಸ್ಟ್ ಪುಢ್, ವಿಜೇತಾ ಹೋಟೆಲ್ ಮಾಲೀಕರು, ಬಸವರಾಜ ಸಂಪಗಾವಿ, ಉಮೇಶ ಹುಂಬಿ, ಶಂಕರ ಗಂಗಪ್ಪನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-21-1905598785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.