ಚನ್ನಮ್ಮನ ಕಿತ್ತೂರು: ಪ್ರಸಕ್ತ ಸಾಲಿನಲ್ಲಿಯೂ ಏರಿಕೆ ಕಾಣದ ಹಸಿ ಮೆಣಸಿನಕಾಯಿ ಧಾರಣಿಯಿಂದಾಗಿ ಬೆಳೆಗಾರ ಕಂಗಾಲಾಗಿದ್ದಾನೆ. ಸಿಗದ ಸೂಕ್ತ ಬೆಲೆಯಿಂದಾಗಿ ಅಕ್ಷರಶಃ ಆತನಿಗೆ ದಿಕ್ಕು ತೋಚದಂತಾಗಿದೆ.

ಸಹಸ್ರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಬೆಲೆಯೇ ಸಿಗದಿರುವ ಪರಿಣಾಮ ಬೆಳೆಗಾರನ ಮುಖ ಬಾಡಿದೆ. ‘ಹಗಲು, ರಾತ್ರಿ ನಿಂತು ಕೊಳವೆಬಾವಿ ನೀರು ಹಾಯಿಸಿದ್ದು ಸೇರಿದಂತೆ ಸ್ವಂತ ಮಾಡಿದ ದುಡಿಮೆ ಹೋದರೆ ಹೋಗಲಿ, ಹಾಕಿದ ಬಂಡವಾಳವಾದರೂ ಕೈಗೆ ಸಿಗಬೇಕಲ್ಲ’ ಎಂಬುದು ಆತನ ವಾದವಾಗಿದೆ.

‘ಸಗಟು ಮಾರುಕಟ್ಟೆಯಲ್ಲಿ 10 ಕೆ.ಜಿ ಚೀಲಕ್ಕೆ(ಒಂದು ಮಣ) ₹120ರಿಂದ 170 ದರವಿದೆ. ಕೆ.ಜಿಯೊಂದಕ್ಕೆ ₹12 ರಿಂದ ₹17ಕ್ಕೆ ಕೊಂಡರೆ, ಹಾಕಿದ ಲಾಗವಾಡ ಹೇಗೆ ಮರಳುತ್ತದೆ’ ಎಂಬುದು ತಿಗಡೊಳ್ಳಿಯ ರೈತ ಬಾಬು ಮಂಡೇದ ಅವರ ಪ್ರಶ್ನೆ.

ಎಕರೆ ಜಮೀನಿನಲ್ಲಿ ಕಾಯಿ ಬೆಳೆಯಲು ಜಮೀನು ಸಿದ್ಧಪಡಿಸುವಿಕೆ, ಮಲ್ಚಿಂಗ್(ಪ್ಲಾಸ್ಟಿಕ್ ಹೊದಿಕೆ), ತರುವು (ಸಸಿ) ನಾಟಿ, ರಸಗೊಬ್ಬರ, ಕ್ರಿಮಿನಾಶಕ, ಮೇಲುಗೊಬ್ಬರ ನೀಡಲು ₹60 ಸಾವಿರದಿಂದ ₹70 ಸಾವಿರ ಖರ್ಚಾಗುತ್ತದೆ.

‘ಗಿಡಗಳು ಕಾಯಿ ಬಿಡುತ್ತಿವೆ. ಧಾರಣಿ ಮಾತ್ರ ತೀವ್ರ ಕುಸಿತ ಕಂಡಿದೆ. ಕಾಯಿ ಕೊಯ್ಲು ಮಾಡುವವರಿಗೆ ದಿನದ ಕೂಲಿ ₹300 ಕೊಡಬೇಕು. ದಿನಕ್ಕೆ 3ರಿಂದ 3.5 ಮಣ(ಒಂದು ಮಣ ಅಂದರೆ 10 ಕೆ.ಜಿ) ಕಾಯಿ ಕೊಯ್ಯುತ್ತಾರೆ. ಈ ಬಾರಿ ಗಿಡಗಳಿಗೆ ಬೂದು ರೋಗ ಬಂದಿತ್ತು. ಕೀಟನಾಶಕ ಸಿಂಪwಣೆ ಮಾಡಲು ಎಕರೆಗೆ ₹2,500 ವೆಚ್ಚ ಮಾಡಲಾಗಿದೆ. ಕೊಯ್ಲು ಮಾಡಿದ ಮೆಣಸಿನಕಾಯಿಯನ್ನು ವಾಹನದಲ್ಲಿ ಸಾಗಿಸಲು ಮತ್ತು ಹಮಾಲಿ ಖರ್ಚು ಹೆಚ್ಚಿದೆ. ದಲ್ಲಾಳಿಗೆ ಕಮಿಷನ್ ಬೇರೆ ಕೊಡಬೇಕು. ಇದರಿಂದಾಗಿ ಏನು ತಿಳಿಯದಾಗಿದೆ’ ಎಂದರು ಮಲ್ಲಾಪುರ ಗ್ರಾಮದ ರೈತ ಮಹೇಶ ಮೂಲಿಮನಿ.

‘ಆಂಧ್ರಕ್ಕೆ ಕಳಿಸಬೇಕೆಂದರೆ, ಅಲ್ಲಿಯೂ ಸ್ಥಳೀಯ ಉತ್ಪನ್ನ ಬರುತ್ತಿದೆ. ಹಾಗಾಗಿ ಇಲ್ಲಿಯೂ ಹೆಚ್ಚಿನ ದರ ಸಿಗುತ್ತಿಲ್ಲ ಎಂದು ದಲ್ಲಾಳಿಗಳು ನಮಗೆ ಹೇಳುತ್ತಾರೆ. ಈ ವರ್ಷ ಮೆಣಸಿನಕಾಯಿ ಬೆಳೆದ ರೈತನ ಮುಖ ಚಿವುಟಿದರೆ ರಕ್ತವೂ ಬಾರದಂತಾಗಿದೆ. ಬೆಳೆಗಾರ ಅಷ್ಟು ನಿಸ್ತೇಜನಾಗಿದ್ದಾನೆ’ ಎಂದು ನೋವಿನಿಂದ ನುಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-21-1813803511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.