ಚನ್ನಮ್ಮನ ಕಿತ್ತೂರು: ಅಂಬಡಗಟ್ಟಿ ಗ್ರಾಮದಲ್ಲಿಯ ಸತೀಶಣ್ಣಾ ಜಾರಕಿಹೊಳಿ ಕಲ್ಯಾಣ ಮಂಟಪದ ಬಳಿ ಇರುವ ಕೋಳಿ ಫಾರ್ಮ್ನಿಂದಾಗಿ ನೊಣಗಳ ಹಾವಳಿ ಹೆಚ್ಚಾಗಿದೆ. ಸುತ್ತಲಿನ ಪ್ರದೇಶ ಗಬ್ಬು ವಾಸನೆಯಿಂದ ಕೂಡಿದೆ. ಫಾರ್ಮ್ ಸ್ಥಗಿತಗೊಳಿಸಲು ಆಗ್ರಹಿಸಿದರೂ ಅಧಿಕಾರಿಗಳು ಮೌನವಾಗಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಹಬೀಬ ಶಿಲೇದಾರ ದೂರಿದ್ದಾರೆ.

‘ನೊಣಗಳ ಹಾವಳಿಯಿಂದ ಜನರು ಹೈರಾಣಾಗಿದ್ದಾರೆ. ಈ ಇದನ್ನು ಎತ್ತಂಗಡಿ ಮಾಡಿಸಬೇಕಿದ್ದ ತಾಲ್ಲೂಕು ಆಡಳಿತ ಸುಮ್ಮನೆ ಕುಳಿತಿದೆ’ ಎಂದು ಆರೋಪಿಸಿದರು.

‘ಕೋಳಿ ಫಾರ್ಮ್ ಸುತ್ತಲಿರುವ ಮನೆಗಳು, ಕಲ್ಯಾಣ ಮಂಟಪ, ಹೋಟೆಲ್, ರಸ್ತೆ ಆಚೆಗಿರುವ ಅಬ್ದುಲ್ ಕಲಾಂ ಆಝಾದ್ ವಸತಿ ಶಾಲೆಯಲ್ಲೂ ನೊಣಗಳು ಮನೆ ಗೋಡೆ, ಚೌಕಟ್ಟು, ಆಹಾರ ಪದಾರ್ಥಗಳಿಗೆ ಮುತ್ತಿಕ್ಕುತ್ತಿವೆ. ಬಿಸಿ ಅಡುಗೆಯಿದ್ದರೆ ಅದನ್ನು ಆರಿಸಲು ಬಾಂಡೆಯ ಬಾಯಿ ತೆರೆದಿಡದಂತಹ ಸ್ಥಿತಿ ಈ ಪ್ರದೇಶದ ಕುಟುಂಬಗಳದಾಗಿದೆ’ ಎಂದು ಅಳಲು ತೋಡಿಕೊಂಡರು. ಅಂಬಡಗಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ನೋಟಿಸು ನೀಡಿದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸುವ ಲಕ್ಷಣ ಗೋಚರಿಸುತ್ತಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಫಾರ್ಮ್ನಿಂದಾಗಿ ಸುತ್ತಲಿನ ಸಾರ್ವಜನಿಕರಿಗೆ ತೊಂದರೆ ಆಗುತ್ತದೆಂದು ತಿಳಿಸಿದರೂ ಸ್ವಚ್ಛತೆ, ಕೋಳಿ ಹಿಕ್ಕೆ ವಿಲೇವಾರಿ ಮಾಡುವಲ್ಲಿ ಸರಿಯಾದ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕೋಳಿ ಸಾಕಾಣಿಕೆ ಸ್ಥಗಿತಗೊಳಿಸಬೇಕು ಎಂದು ಎಚ್ಚರಿಕೆ ನೊಟೀಸ್ ನೀಡಿಯಾಗಿದೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-1247135268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.