ಚಿಕ್ಕೋಡಿ: ‘ಪಟ್ಟಣದಲ್ಲಿ 10 ಎಕರೆ ಜಾಗದಲ್ಲಿ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು’ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಅಂಬೇಡ್ಕರ್ ಸೇರಿದಂತೆ ಮಹಾತ್ಮರ ಜಯಂತಿಗಳನ್ನು ಎಲ್ಲ ಸಮುದಾಯದ ಜನರು ಭಾಗಿಯಾಗಿ ಆಚರಣೆ ಮಾಡಬೇಕು. ಶೋಷಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿಕೊಡುವ ಜೊತೆಗೆ ಜಗತ್ತೇ ಮೆಚ್ಚುವ ಸಂವಿಧಾನ ನೀಡಿದ ಅಂಬೇಡ್ಕರ್ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಮಾತನಾಡಿ, ‘ಅಂಬೇಡ್ಕರ್ ಅವರು ಬುದ್ಧ, ಬಸವ ಅವರ ತತ್ವಗಳನ್ನು ಅಳವಡಿಕೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದರು.

ಉಪನ್ಯಾಸಕ ಹೊಂಬಯ್ಯ ಹೊನ್ನಲಗೆರೆ ಉಪನ್ಯಾಸ ನೀಡಿದರು.

ಅಂಬೇಡ್ಕರ್ ಅವರ ಒಡನಾಡಿ ರಾಮಚಂದ್ರ ಕಾಂಬಳೆ ಹಾಗೂ ಪತ್ರಕರ್ತರಾದ ಸಂಜೀವ ಕಾಂಬಳೆ, ವಿಮಲಾ ಚಿನಕೇಕರ ಅವರನ್ನು ಗೌರವಿಸಲಾಯಿತು.

ತಹಶೀಲ್ದಾರ್ ರಾಜೇಶ ಬುರ್ಲಿ, ಸಮಾಜ ಕಲ್ಯಾಣ ಇಲಾಖೆಯ ಸಹ ನಿರ್ದೇಶಕಿ ಅರ್ಚನಾ ಸಾನೆ, ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ನರೇಂದ್ರ ನೇರ್ಲೇಕರ, ರಮೇಶ ಪಾಟೀಲ, ಅರವಿಂದ ಘಟ್ಟಿ, ರಾಮಾ ಮಾನೆ, ಅಶೋಕ ಭಂಡಾರಕರ, ರಾವಸಾಹೇಬ ಫಕೀರೆ, ಸುದರ್ಶನ ತಮ್ಮಣ್ಣವರ, ಅನಿಲ ಮಾನೆ, ಬಸವರಾಜ ಢಾಕೆ, ಪ್ರವೀಣ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ, ಡಿಡಿಪಿಐ ಆರ್.ಎಸ್. ಸೀತಾರಾಮು, ಆಶಾ ಯಂಕಪ್ಪಗೋಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-21-2058899625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.