ಚಿಕ್ಕೋಡಿ: ಕೆಎಲ್ಇ ಗೌರವಾಧ್ಯಕ್ಷ ಪ್ರಭಾಕರ ಕೋರೆ ಪ್ರಯತ್ನದಿಂದ ಡಿಕೆಎಸ್ಎಸ್ಕೆ ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆಯುವ ಮೂಲಕ ಆರ್ಥಿಕ ಪ್ರಗತಿಗೆ ಕಾರಣರಾಗಿದ್ದಾರೆ ಎಂದು ಅಂಕಲಿಯ ಡಿಕೆಎಸ್ಎಸ್ಕೆ ಶಾಖೆಯ ಅಧ್ಯಕ್ಷ ಶಿವಾನಂದ ಹಕಾರೆ ಹೇಳಿದರು.

ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಸೋಮವಾರ ಡಿ.ಕೆ.ಎಸ್.ಎಸ್.ಕೆ ಶಾಖೆಯ 35ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಿ.ಕೆ.ಎಸ್.ಎಸ್.ಕೆಯ 5ನೇ ಶಾಖೆಯು 35 ವಸಂತಗಳನ್ನು ಕಂಡಿದ್ದು, ಇಲ್ಲಿಯವರೆಗೆ ₹ 23.86 ಕೋಟಿ ಠೇವು ಸಂಗ್ರಹಿಸಿದೆ. ₹ 3.54 ಕೋಟಿ ಸಾಲ ವಿತರಿಸಿದೆ. ₹ 897.75 ಕೋಟಿ ವಾರ್ಷಿಕ ವಹಿವಾಟು ಹೊಂದಿದ್ದು, 2025-26ನೇ ಆರ್ಥಿಕ ವರ್ಷದಲ್ಲಿ ₹ 65 ಲಕ್ಷ ಲಾಭ ಗಳಿಸಿದೆ ಎಂದರು. ಸಿ.ಬಿ. ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಬಿ. ಖಾಂಡಗಾವೆ ಮಾತನಾಡಿದರು. ಮುಖ್ಯ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಕರೋಶಿ, ಶಾಖಾ ವ್ಯವಸ್ಥಾಪಕ ಸಂದೀಪ ಜೋಗೋಜೆ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-21-1172057771

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.